ADVERTISEMENT

ಟಿಟಿಡಿ ಗೋಸಂರಕ್ಷಣಾ ಟ್ರಸ್ಟ್‌ಗೆ ₹1 ಕೋಟಿ ದೇಣಿಗೆ ನೀಡಿದ ಭಕ್ತ

ಪಿಟಿಐ
Published 28 ಫೆಬ್ರುವರಿ 2026, 14:36 IST
Last Updated 28 ಫೆಬ್ರುವರಿ 2026, 14:36 IST
   

ತಿರುಪತಿ : ಹೈದರಾಬಾದ್‌ನ ಭಕ್ತರೊಬ್ಬರು ತಿರುಪತಿ ತಿರುಮಲ ದೇವಸ್ಥಾನಂನ (ಟಿಟಿಡಿ) ಶ್ರೀ ವೆಂಕಟೇಶ್ವರ ಗೋಸಂರಕ್ಷಣಾ ಟ್ರಸ್ಟ್‌ಗೆ ₹1 ಕೋಟಿ ದೇಣಿಗೆ ನೀಡಿದ್ದಾರೆ.

ರಾಚಮಲ್ಲು ವೆಂಕಟ ಸುಜಿತ ಅವರು ಟಿಟಿಡಿ ಅಧ್ಯಕ್ಷ ಬಿ.ಆರ್‌. ನಾಯ್ಡು ಅವರಿಗೆ ₹1 ಕೋಟಿ ಮೊತ್ತದ ಚೆಕ್‌ ಅನ್ನು ದೇಣಿಗೆಯಾಗಿ ನೀಡಿದರು ಎಂದು ಟಿಟಿಡಿ ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ.

ಗೋವುಗಳ ಸಂರಕ್ಷಣೆಯ ಉದ್ದೇಶದಿಂದ ವೆಂಕಟೇಶ್ವರ ಗೋಸಂರಕ್ಷಣಾ ಟ್ರಸ್ಟ್‌ ಅನ್ನು ಸ್ಥಾಪಿಸಲಾಗಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.