ADVERTISEMENT

DGCA: ₹70 ಲಕ್ಷ ದಂಡ ಪಾವತಿಸಿದ ವಿಸ್ತಾರ ಏರ್‌ಲೈನ್ಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಫೆಬ್ರುವರಿ 2023, 9:59 IST
Last Updated 6 ಫೆಬ್ರುವರಿ 2023, 9:59 IST
 ವಿಸ್ತಾರ ಏರ್‌ಲೈನ್ಸ್
ವಿಸ್ತಾರ ಏರ್‌ಲೈನ್ಸ್   

ನವದೆಹಲಿ: ದೇಶದ ಈಶಾನ್ಯ ಭಾಗದ ಹಿಂದುಳಿದ ಪ್ರದೇಶಗಳಿಗೆ ಕನಿಷ್ಠ ಸಂಖ್ಯೆಯ ಕಡ್ಡಾಯ ವಿಮಾನಗಳನ್ನು ನಿರ್ವಹಿಸಲು ವಿಫಲವಾದ ಕಾರಣಕ್ಕಾಗಿ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯಕ್ಕೆ(ಡಿಜಿಸಿಎ) ವಿಸ್ತಾರ ಏರ್‌ಲೈನ್ಸ್ ₹ 70 ಲಕ್ಷ ದಂಡ ಪಾವತಿಸಿದೆ.

ವಿಸ್ತಾರ ಏರ್‌ಲೈನ್ಸ್ ಡಿಜಿಸಿಎಗೆ ₹ 70 ಲಕ್ಷ ದಂಡ ಪಾವತಿಸಿದೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ಟ್ವೀಟ್‌ ಮಾಡಿದೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ವಿಸ್ತಾರ ವಿಮಾನಯಾನ ಸಂಸ್ಥೆ ಈಶಾನ್ಯ ರಾಜ್ಯಗಳ ಹಿಂದುಳಿದ ಪ್ರದೇಶಗಳಿಗೆ ಕನಿಷ್ಠ ಸಂಖ್ಯೆಯ ಕಡ್ಡಾಯ ವಿಮಾನಗಳನ್ನು ನಿರ್ವಹಿಸದಿದ್ದಕ್ಕಾಗಿ ದಂಡ ವಿಧಿಸಿತ್ತು. ಇದೀಗ ವಿಮಾನಯಾನ ಸಂಸ್ಥೆ ದಂಡವನ್ನು ಪಾವತಿ ಮಾಡಿದೆ.

ADVERTISEMENT

ವಿಸ್ತಾರ ಸಂಸ್ಥೆ ಸರ್ಕಾರದ ಆದೇಶಗಳನ್ನು ಮತ್ತು ಕಾನೂನು ಪಾಲನೆ ಮಾಡುತ್ತಿದೆ. ಒಂದು ವಿಮಾನವನ್ನು ನಿರ್ವಹಿಸದಿರುವುದಕ್ಕೆ ಸಂಸ್ಥೆ ದಂಡ ಪಾವತಿಸಿದೆ. ನಾವು ಈ ಭಾಗಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ವಿಮಾನಗಳನ್ನು ನಿರ್ವಹಣೆ ಮಾಡುತ್ತಿದ್ದೇವೆ ಎಂದು ವಿಸ್ತಾರ ವಕ್ತಾರರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.