ADVERTISEMENT

ಜನಪ್ರಿಯ ಬ್ಯೂಟಿ ಬ್ರಾಂಡ್‌ನಲ್ಲಿ ಕಾಣಿಸಿಕೊಂಡ 'ಸ್ಲಮ್‌' ಹುಡುಗಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಮೇ 2023, 3:22 IST
Last Updated 22 ಮೇ 2023, 3:22 IST
ಮಲೀಶಾ ಖರ್ವಾ (Instagram: Maleesha Kharwa)
ಮಲೀಶಾ ಖರ್ವಾ (Instagram: Maleesha Kharwa)   

ಮುಂಬೈನ ಧಾರಾವಿ ಕೊಳೆಗೇರಿಯಿಂದ(ಸ್ಲಮ್‌) ಬಂದ ಹದಿನಾಲ್ಕು ವರ್ಷದ ಮಲೀಶಾ ಖರ್ವಾ, ಜನಪ್ರಿಯ ಬ್ಯೂಟಿ ಬ್ರಾಂಡ್‌ನಲ್ಲಿ ಮಿಂಚುತ್ತಿದ್ದಾರೆ. ಪ್ರತಷ್ಠಿತ ಬ್ಯೂಟಿ ಬ್ರಾಂಡ್‌ ಫಾರೆಸ್ಟ್‌ ಎಸೆನ್ಷಿಯಲ್ಸ್‌ನ ’ಯುವತಿ ಕಲೆಕ್ಷನ್‌’ ಜಾಹೀರಾತಿನಲ್ಲಿ ಮಲೀಶಾ ಖರ್ವಾ ಕಾಣಿಸಿಕೊಂಡಿದ್ದಾರೆ.

2020ರಲ್ಲಿ ಮುಂಬೈನ ಧಾರಾವಿ ಕೊಳಗೇರಿ ಪ್ರದೇಶದಲ್ಲಿ ವಿಡಿಯೊ ಚಿತ್ರೀಕರಣ ಮಾಡುತ್ತಿರುವ ಸಂದರ್ಭದಲ್ಲಿ ಹಾಲಿವುಡ್ ನಟ ರಾಬರ್ಟ್‌ ಹಾಪ್‌ಮನ್‌ ಕಣ್ಣಿಗೆ ಮಲೀಶ್‌ ಖರ್ವಾ ಅವರು ಬೀಳುತ್ತಾರೆ. ತಕ್ಷಣ ರಾಬರ್ಟ್‌ ಹಾಪ್‌ಮನ್‌ ಅವರು ಮಲೀಶ್‌ ಖಾರ್ವಾ ಹೆಸರಿನಲ್ಲಿ ಇನ್‌ಸ್ಟಾಗ್ರಾಂನಲ್ಲಿ ಖಾತೆಯೊಂದು ತೆರೆದರು. ಅಲ್ಲದೇ ಮಲೀಶಾ ಭವಿಷ್ಯಕ್ಕೆ ಸಹಾಯ ಮಾಡುವಂತೆ ’ಗೋಫಂಡ್‌ಮಿ’ ಎಂಬ ಹೆಸರಿನಲ್ಲಿ ಫಂಡ್‌ ಸಂಗ್ರಹ ಮಾಡಿದರು. ಇದೀಗ ಮಲೀಶಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಸುಮಾರು 2.5 ಲಕ್ಷ ಫಾಲೋವರ್ಸ್‌ ಹೊಂದಿದ್ದಾರೆ. ಅಲ್ಲದೇ ಮಾಡೆಲಿಂಗ್‌ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸುತ್ತಿದ್ದಾರೆ.

ತಮ್ಮ ಬ್ರಾಂಡ್‌ನಲ್ಲಿ ಮಲೀಶಾ ಖರ್ವಾ ಕಾಣಿಸಿಕೊಂಡಿರುವುದಕ್ಕೆ ಬ್ಯೂಟಿ ಬ್ರಾಂಡ್‌ ’ಫಾರೆಸ್ಟ್ ಎಸೆನ್ಷಿಯಲ್ಸ್‌' ಸಂತಸ ವ್ಯಕ್ತಪಡಿಸಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದೆ. ’ಕಂಡ ಕನಸು ಅವಳ ಕಣ್ಣೆದುರೆ ನನಸಾಗಿದಕ್ಕೆ ಆಕೆ ಖುಷಿಯಾಗಿದ್ದು, ಆಕೆಯ ಕಣ್ಣುಗಳು ಅದಕ್ಕೆ ಸಾಕ್ಷಿಯಾಗಿವೆ. ಡ್ರೀಮ್ ಕಮ್‌ ಟ್ರೂ ಎಂಬ ವಾಕ್ಯಕ್ಕೆ ಮಲೀಶಾ ಖರ್ವಾ ಕಥೆ ಸ್ಪೂರ್ತಿಯಾಗಲಿದೆ’ ಎಂದು ಬರೆದುಕೊಂಡಿದೆ.

ADVERTISEMENT

ಕೊಳಗೇರಿಯಿಂದ ಬಂದು ಪ್ರತಿಷ್ಠಿತ ಬ್ರಾಂಡ್‌ವೊಂದರಲ್ಲಿ ಕಾಣಿಸಿಕೊಂಡಿರುವುದಕ್ಕೆ ನೆಟ್ಟಿಗರು ಮಲೀಶಾಗೆ ಅಭಿನಂದನೆ ತಿಳಿಸಿದ್ದಾರೆ. ನಿಮ್ಮ ಸಂತೋಷವನ್ನು ಕಂಡು ಖುಷಿಯಾಗಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.