ADVERTISEMENT

ಭಾರತ–ಚೀನಾದಿಂದ ನಿಗದಿಯಂತೆ ಸೇನಾ ತುಕಡಿ ವಾಪಸಾತಿ: ಜನರಲ್‌ ಮನೋಜ್‌ ಪಾಂಡೆ

ಪಿಟಿಐ
Published 12 ಸೆಪ್ಟೆಂಬರ್ 2022, 10:55 IST
Last Updated 12 ಸೆಪ್ಟೆಂಬರ್ 2022, 10:55 IST
ಭಾರತ–ಚೀನಾ ಗಡಿಯ ಗೋಗ್ರಾ ಬಳಿ ಭಾರತ ಸೇನೆ ಯೋಧರು ಗಸ್ತು ತಿರುಗುತ್ತಿರುವುದು –ಪಿಟಿಐ ಚಿತ್ರ
ಭಾರತ–ಚೀನಾ ಗಡಿಯ ಗೋಗ್ರಾ ಬಳಿ ಭಾರತ ಸೇನೆ ಯೋಧರು ಗಸ್ತು ತಿರುಗುತ್ತಿರುವುದು –ಪಿಟಿಐ ಚಿತ್ರ   

ನವದೆಹಲಿ: ‘ಭಾರತ –ಚೀನಾ ಗಡಿಯಲ್ಲಿನ ಗೋಗ್ರಾ–ಹಾಟ್‌ಸ್ಪ್ರಿಂಗ್‌ ಬಳಿ ಇರುವ 15ನೇ ಗಸ್ತು ತಾಣದಿಂದ ಉಭಯ ದೇಶಗಳ ಸೇನಾ ತುಕಡಿಗಳನ್ನು ವಾಪಸು ಕರೆಸಿಕೊಳ್ಳುವ ಪ್ರಕ್ರಿಯೆಯು ನಿಗದಿಯಂತೆ ನಡೆಯುತ್ತಿದೆ’ ಎಂದು ಸೇನಾ ಮುಖ್ಯಸ್ಥ ಜನರಲ್‌ ಮನೋಜ್‌ ಪಾಂಡೆ ಅವರು ಸೋಮವಾರ ತಿಳಿಸಿದರು.

ಗಡಿ ಭಾಗದಲ್ಲಿ ನಿಯೋಜಿಸಿರುವ ಸೇನೆ ಹಿಂಪಡೆಯುವ ಪ್ರಕ್ರಿಯೆ ಸೆಪ್ಟೆಂಬರ್‌ 12ರ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ್ ಅರಿಂದಮ್‌ ಬಾಗ್ಚಿ ಅವರು ಈಚೆಗೆ ತಿಳಿಸಿದ್ದರು.

ಲಡಾಖ್‌ಗೆ ಎರಡು ದಿನಗಳ ಭೇಟಿ ನೀಡಿದ್ದ ಜನರಲ್‌ ಪಾಂಡೆ ಅವರು, ‘ವಸ್ತುಸ್ಥಿತಿ ವಿವರ ಪಡೆಯಬೇಕಿದೆ. ಆದರೆ, ಅದು ನಿಗದಿಯಂತೆ ನಡೆಯುತ್ತಿದೆ‘ ಎಂದರು. ಎರಡು ದಿನದ ಹಿಂದೆ ಸೇನೆ ವಾಪಸಾತಿ ಪ್ರಕ್ರಿಯೆ ಆರಂಭವಾಗಿತ್ತು.

ADVERTISEMENT

ಪೂರ್ವ ಲಡಾಖ್‌ನಲ್ಲಿ ಪಾಂಗಾಂಗ್ ಸರೋವರದ ಬಳಿ ಉಭಯ ದೇಶಗಳ ಸೇನೆಯ ನಡುವೆ 2020ರ ಮೇ 5ರಂದು ಘರ್ಷಣೆ ನಡೆದಿದ್ದು, ಆ ನಂತರ ಅನಿಶ್ಚಿತ ಪರಿಸ್ಥಿತಿ ನಿರ್ಮಾಣವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.