ADVERTISEMENT

ತಮಿಳುನಾಡು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಟಾಲಿನ್‌ ನೇತೃತ್ವದ ಡಿಎಂಕೆ ಮೇಲುಗೈ

ಪಿಟಿಐ
Published 3 ಜನವರಿ 2020, 14:53 IST
Last Updated 3 ಜನವರಿ 2020, 14:53 IST
   

ಚೆನ್ನೈ: ತಮಿಳುನಾಡಿನ 27 ಜಿಲ್ಲೆಗಳಲ್ಲಿನ ಗ್ರಾಮೀಣ ಆಡಳಿತ ಸಂಸ್ಥೆಗಳಿಗೆ ನಡೆದ ಚುನವಾಣೆಯ ಮತ ಎಣಿಕೆ ಪ್ರಕ್ರಿಯೆ ಎರಡನೇ ದಿನವಾದ ಶುಕ್ರವಾರವೂ ಮುಂದುವರೆದಿದ್ದು, ಪ್ರಕಟವಾಗುತ್ತಿರುವ ಫಲಿತಾಂಶದ ಅಂಕಿ ಅಂಶಗಳನ್ನು ಗಮನಿಸಿದರೆ ಆಡಳಿತಾರೂಢ ಎಐಎಡಿಎಂಕೆ ಮತ್ತು ಅದರ ಮಿತ್ರ ಪಕ್ಷಗಳಿಗಿಂತ, ಡಿಎಂಕೆ ಮತ್ತು ಅದರ ಮಿತ್ರ ಪಕ್ಷಗಳು ಮೇಲುಗೈ ಸಾಧಿಸಿವೆ.

ಪಂಚಾಯ್ತಿ ಯೂನಿಯನ್‌ಗಳ (ತಾಲ್ಲೂಕು ಪಂಚಾಯ್ತಿ) 5,090 ವಾರ್ಡ್‌ಗಳಿಗೆ ಚುನಾವಣೆ ನಡೆದಿತ್ತು. ಇಲ್ಲಿವರೆಗಿನರಾಜ್ಯ ಚುನಾವಣಾ ಆಯೋಗ ಘೋಷಿಸಿರುವ ಫಲಿತಾಂಶದ ಪ್ರಕಾರ,ಎಐಎಡಿಎಂಕೆ ಮತ್ತು ಅದರ ಮೈತ್ರಿ ಪಕ್ಷಗಳು 1,528ರಲ್ಲಿ ಜಯಗಳಿಸಿದ್ದರೆ, ಡಿಎಂಕೆ ಮತ್ತು ಅದರ ಮೈತ್ರಿ ಪಕ್ಷಗಳು 1895 ವಾರ್ಡ್‌ಗಳಲ್ಲಿ ಗಲುವು ದಾಖಲಿಸಿವೆ.‌

ಎಐಎಡಿಎಂ ಅಭ್ಯರ್ಥಿಗಳು 1386 ವಾರ್ಡ್‌ಗಳಲ್ಲಿ ಜಯಿಸಿದ್ದಾರೆ. ಅದರ ಮಿತ್ರ ಪಕ್ಷಗಳಾದ ಡಿಎಂಡಿಕೆ–89, ಬಿಜೆಪಿ–53 ಸ್ಥಾನಗಳಲ್ಲಿ ಗೆದ್ದಿವೆ. ಡಿಎಂಕೆ ಪಕ್ಷದ ಅಭ್ಯರ್ಥಿಗಳು 1715 ವಾರ್ಡ್‌ಗಳಲ್ಲಿ ಗೆಲುವಿನ ನಗೆ ಬೀರಿದ್ದರೆ, ಅದರ ಮಿತ್ರ ಪಕ್ಷಗಳಾದ ಕಾಂಗ್ರೆಸ್‌–96, ಸಿಪಿಐ– 24 ಸ್ಥಾನಗಳಲ್ಲಿ ಜಯಗಳಿಸಿವೆ. ಇನ್ನೂ ಕೆಲ ವಾರ್ಡ್‌ಗಳ ಫಲಿತಾಂಶ ಘೋಷಣೆಯಾಗಬೇಕಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.