ADVERTISEMENT

ಕೋವಿಡ್‌ಗೆ ನನ್ನಲ್ಲಿ ಪ್ರತಿರೋಧವಿದೆ ಎಂದ ಡೊನಾಲ್ಡ್‌ ಟ್ರಂಪ್‌

ಏಜೆನ್ಸೀಸ್
Published 11 ಅಕ್ಟೋಬರ್ 2020, 15:49 IST
Last Updated 11 ಅಕ್ಟೋಬರ್ 2020, 15:49 IST
ಶ್ವೇತ ಭವನದ ಸಮಾರಂಭದಲ್ಲಿ ಮಾತನಾಡುವ ವೇಳೆ ಮಾಸ್ಕ್‌ ತೆಗೆಯುತ್ತಿರುವ ಡೊನಾಲ್ಡ್‌ ಟ್ರಂಪ್‌ (ಎಎಫ್‌ಪಿ ಚಿತ್ರ)
ಶ್ವೇತ ಭವನದ ಸಮಾರಂಭದಲ್ಲಿ ಮಾತನಾಡುವ ವೇಳೆ ಮಾಸ್ಕ್‌ ತೆಗೆಯುತ್ತಿರುವ ಡೊನಾಲ್ಡ್‌ ಟ್ರಂಪ್‌ (ಎಎಫ್‌ಪಿ ಚಿತ್ರ)   

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಪ್ರಚಾರಕ್ಕೆ ಹಾದಿಗೆ ಮರಳಲು ಸಿದ್ಧತೆ ನಡೆಸುತ್ತಿರುವ ಡೊನಾಲ್ಡ್‌ ಟ್ರಂಪ್ ಅವರು ತಾವು ಕೋವಿಡ್‌ ವಿರುದ್ಧ ಪ್ರತಿರೋಧಕ ಶಕ್ತಿ ಹೊಂದಿರುವುದಾಗಿ ಹೇಳಿದ್ದಾರೆ.

ಅಮೆರಿಕದ ಸುದ್ದಿ ವಾಹಿನಿ 'ಫಾಕ್ಸ್‌ ನ್ಯೂಸ್‌'ಗೆ ನೀಡಿರುವ ಸಂದರ್ಶನದಲ್ಲಿ ಭಾನುವಾರ ಮಾತನಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ‘ಕೋವಿಡ್‌ಗೆ ನಾನು ರೋಗನಿರೋಧಕನೆಂಬಂತೆ ತೋರುತ್ತಿದೆ. ನನ್ನೊಳಗಿನ ರೋಗ ಪ್ರತಿರೋಧವು ದೀರ್ಘಕಾಲೀನವಾಗಿರಬಹುದು, ಅಲ್ಪಕಾಲೀನವಾಗಿರಬಹುದು, ಅಥವಾ ಶಾಶ್ವತವಾಗಿರಬಹುದು. ಇದರ ಬಗ್ಗೆ ನನಗೂ ಗೊತ್ತಿಲ್ಲ. ಯಾರಿಗೂ ಗೊತ್ತಿಲ್ಲ. ಆದರೆ, ನಾನು ಮಾತ್ರ ಕೋವಿಡ್‌ಗೆ ಪ್ರತಿಯಾಗಿ ರೋಗ ಪ್ರತಿರೋಧಕತನವನ್ನು ಹೊಂದಿದ್ದೇನೆ,’ ಎಂದು ಹೇಳಿಕೊಂಡಿದ್ದಾರೆ.

ಇತ್ತೀಚೆಗೆ ಕೊರೊನಾ ವೈರಸ್‌ ಸೊಂಕಿಗೆ ಒಳಗಾಗಿದ್ದ ಡೊನಾಲ್ಡ್‌ ಟ್ರಂಪ್‌, ಮೂರು ದಿನ ಸೇನೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದಾರೆ. ಆಸ್ಪತ್ರೆಯಿಂದ ಶ್ವೇತ ಭವನಕ್ಕೆ ಬಂದವರೇ ಮಾಸ್ಕ್‌ ತೆಗೆದು ವಿವಾದಕ್ಕೂ ಕಾರಣರಾಗಿದ್ದರು.

ADVERTISEMENT

ಟ್ರಂಪ್‌ ಅವರು ಪ್ರಚಾರದಲ್ಲಿ ತೊಡಗಬಹುದು ಎಂದು ಈಗಾಗಲೇ ವೈದ್ಯರೂ ಹೇಳಿದ್ದಾರೆ.

ಅಮೆರಿಕದ ಅಧ್ಯಕ್ಷೀಯ ಚುನಾವಣೆ ನವೆಂಬರ್‌ ಮೂರಕ್ಕೆ ನಿಗದಿಯಾಗಿದ್ದು, ಚುನಾವಣೆ ಪ್ರಚಾರಗಳು ನಡೆಯುತ್ತಿವೆ. ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಜೋ ಬೈಡನ್‌ ಅವರು ಚುನಾವಣೆಯಲ್ಲಿ ಟ್ರಂಪ್‌ಗೆ ಭಾರಿ ಪ್ರತಿರೋಧವೊಡ್ಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.