ADVERTISEMENT

ಹೊಸ ಬಾಬರಿ ಮಸೀದಿಗೆ ದೇಣಿಗೆ ಕೊಡಬೇಡಿ: ಒವೈಸಿ

​ಪ್ರಜಾವಾಣಿ ವಾರ್ತೆ
Published 27 ಜನವರಿ 2021, 19:44 IST
Last Updated 27 ಜನವರಿ 2021, 19:44 IST
ಅಸಾದುದ್ದೀನ್‌ ಒವೈಸಿ
ಅಸಾದುದ್ದೀನ್‌ ಒವೈಸಿ   

ಬೀದರ್: ‘ಅಯೋಧ್ಯೆಯಲ್ಲಿ ಐದು ಎಕರೆ ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಹೊಸ ಬಾಬರಿ ಮಸೀದಿಗೆ ಯಾರೊಬ್ಬರೂ ದೇಣಿಗೆ ನೀಡಬಾರದು. ಬದಲಾಗಿ, ಬಡವರು, ಅನಾಥರ ಮದುವೆಗೆ ದೇಣಿಗೆ ಕೊಡಿ’ ಎಂದು ಆಲ್ ಇಂಡಿಯಾ ಮಜ್ಲೀಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಪಕ್ಷದ ಅಧ್ಯಕ್ಷ, ಸಂಸದ ಅಸಾದುದ್ದೀನ್ ಒವೈಸಿ ಮನವಿ ಮಾಡಿದರು.

ಬೀದರ್‌ನಲ್ಲಿ ಮಂಗಳವಾರ ರಾತ್ರಿರಾಷ್ಟ್ರೀಯ ಭಾವೈಕ್ಯತೆ ಮತ್ತು ಭ್ರಾತೃತ್ವ ವೇದಿಕೆ ಆಯೋಜಿಸಿದ್ದ ಶೋಷಿತರ ಐಕ್ಯತಾ ಸಮಾವೇಶದಲ್ಲಿ ಮಾತನಾಡಿದ ಅವರು, ‘ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸ ಪ್ರಕರಣದ ತೀರ್ಪಿನ ನಂತರ ಐದು ಎಕರೆ ಪಡೆದವರು ಹೇಡಿಗಳು, ಕ್ರೂರಿಗಳು. ಹೊಸ ಮಸೀದಿ ನಿರ್ಮಾಣಕ್ಕೆ ಜಮೀನು ಪಡೆದು ಈಗ ಹಣ ಕೇಳುತ್ತಿದ್ದಾರೆ. ಅಂತಹ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುವುದು ಪಾಪ. ಅದು ಧರ್ಮ ವಿರೋಧಿಯೂ ಆಗಲಿದೆ’ ಎಂದರು.

‘ಧರ್ಮ ವಿರೋಧಿ ಮಸೀದಿ ನಮಗೆ ಬೇಕಿಲ್ಲ. ಪ್ರವಾದಿ ಬದುಕಿದ್ದರೆ ಅವರೂ ಸಹ ಅಸಹ್ಯ ಪಟ್ಟುಕೊಳ್ಳುತ್ತಿದ್ದರು’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.