ADVERTISEMENT

ಕೇರಳ ಹೈಕೋರ್ಟ್‌ ನ್ಯಾಯಮೂರ್ತಿ ಕಾರಿನ ಮೇಲೆ ಎಣ್ಣೆ ಸುರಿದು ಪ್ರತಿಭಟನೆ

ಪಿಟಿಐ
Published 3 ಫೆಬ್ರುವರಿ 2021, 11:06 IST
Last Updated 3 ಫೆಬ್ರುವರಿ 2021, 11:06 IST
ಕೇರಳ ಹೈಕೋರ್ಟ್‌
ಕೇರಳ ಹೈಕೋರ್ಟ್‌   

ಕೊಚ್ಚಿ: 2018ರಲ್ಲಿ ತನ್ನ ಸಂಬಂಧಿಯೊಬ್ಬರು ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಯುತ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ವ್ಯಕ್ತಿಯೊಬ್ಬ ಕೇರಳ ಹೈಕೋರ್ಟ್‌ ನ್ಯಾಯಮೂರ್ತಿ ಕಾರಿಗೆ ಕಪ್ಪು ಮೋಟಾರ್‌ ಎಣ್ಣೆ ಸುರಿದು, ಪ್ರತಿಭಟನೆ ನಡೆಸಿದ್ದಾನೆ.

ಆರೋಪಿಯನ್ನು ರಘುನಾಥ್‌ ಎಂದು ಗುರುತಿಸಲಾಗಿದ್ದು, ‘ನ್ಯಾಯಯುತ ತನಿಖೆ’ ನಡೆಯಬೇಕು ಎಂದು ಆಗ್ರಹಿಸಿ ಆತ ಹೈಕೋರ್ಟ್‌ ಕಟ್ಟಡದ ಮುಂದೆ ಪ್ರತಿಭಟನೆ ನಡೆಸುತ್ತಿದ್ದನು. 2018ರಲ್ಲಿ ಕೇರಳದ ಪಟ್ಟನಂತಿಟ್ಟ ಜಿಲ್ಲೆಯಲ್ಲಿ ಆರೋಪಿಯ ಸಂಬಂಧಿ ಜಸ್ನಾ ಮರಿಯಾ ಜೇಮ್ಸ್‌ ಎಂಬವರು ನಾಪತ್ತೆಯಾಗಿದ್ದರು.

‘ಹೈಕೋರ್ಟ್‌ ಆವರಣದಲ್ಲಿದ್ದ ನ್ಯಾಯಮೂರ್ತಿ ವಿ. ಶಿರ್ಸಿ ಅವರ ಕಾರಿನ ಮೇಲಿನ ರಘುನಾಥ್‌ ಎಣ್ಣೆ ಸುರಿದಿದ್ದಾನೆ. ಸದ್ಯ ಆತನನ್ನು ಬಂಧಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದರು.

ADVERTISEMENT

2018 ಮಾರ್ಚ್‌ 21 ರಂದು 20 ವರ್ಷದ ಕಾಲೇಜು ವಿದ್ಯಾರ್ಥಿನಿ ಜಸ್ನಾ ಮರಿಯಾ ತನ್ನ ಮನೆಯಿಂದ ಕಾಣೆಯಾಗಿದ್ದಳು. ಆಕೆಯನ್ನು ಪತ್ತೆ ಹಚ್ಚಲು 15 ಮಂದಿಯ ವಿಶೇಷ ತನಿಖಾ ತಂಡವನ್ನೂ ರಚಿಸಲಾಗಿತ್ತು. ಅಲ್ಲದೆ ಕೇರಳ ಪೊಲೀಸರು, ಆಕೆಯ ಬಗ್ಗೆ ಮಾಹಿತಿ ನೀಡಿದವರಿಗೆ ₹5 ಲಕ್ಷ ನಗದು ಪುರಸ್ಕಾರ ಘೋಷಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.