ADVERTISEMENT

ಡ್ರಗ್ಸ್‌ ಪ್ರಕರಣ: ಶಾರುಕ್‌ ಪುತ್ರ ಸೇರಿ 8 ಮಂದಿಗೆ 14 ದಿನ ನ್ಯಾಯಾಂಗ ಬಂಧನ

ಪಿಟಿಐ
Published 7 ಅಕ್ಟೋಬರ್ 2021, 14:42 IST
Last Updated 7 ಅಕ್ಟೋಬರ್ 2021, 14:42 IST
   

ಮುಂಬೈ: ಬಾಲಿವುಡ್‌ ನಟ ಶಾರುಖ್‌ ಖಾನ್‌ ಅವರ ಪುತ್ರ,ಡ್ರಗ್ಸ್‌ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆರ್ಯನ್‌ ಖಾನ್‌ ಮತ್ತು ಇತರ 7 ಮಂದಿಗೆ ಮುಂಬೈ ನ್ಯಾಯಾಲಯವು ಗುರುವಾರ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಆರೋಪಿಗಳ ಜಾಮೀನು ಅರ್ಜಿಗಳ ವಿಚಾರಣೆ ಶುಕ್ರವಾರ ನಡೆಯಲಿದೆ ಎಂದು ನ್ಯಾಯಾಲಯ ಹೇಳಿದೆ. ಮಾದಕ ದ್ರವ್ಯ ನಿಯಂತ್ರಣಾ ವಿಭಾಗವು (ಎನ್‌ಸಿಬಿ) ಆರೋಪಿಗಳನ್ನು ತಮ್ಮ ವಶಕ್ಕೆ ನೀಡುವಂತೆ ಕೋರಿತ್ತು. ಆದರೆ ಎನ್‌ಸಿಬಿಯ ವಿನಂತಿಯನ್ನು ನ್ಯಾಯಾಲಯ ಪುರಸ್ಕರಿಸಲಿಲ್ಲ.

ಅಕ್ಟೋಬರ್ 3 ರಂದು ಮುಂಬೈ ಕಡಲ ತೀರದಲ್ಲಿ ಐಷಾರಾಮಿ ಹಡಗಿನ ಮೇಲೆ ದಾಳಿ ನಡೆಸಿದ್ದ ಎನ್‌ಸಿಬಿ ತಂಡ, ಶಾರುಖ್‌ ಮಗ ಆರ್ಯನ್‌ ಖಾನ್, ಮುನ್ಮುನ್ ಧಮೆಚಾ ಮತ್ತು ಅರ್ಬಾಜ್ ಎಂಬುವವರನ್ನು ಬಂಧಿಸಿತ್ತು. ನಂತರ ಇತರ 5 ಮಂದಿಯನ್ನು ಸೆರೆ ಹಿಡಿದಿತ್ತು.

ADVERTISEMENT

ಈ ಹಿಂದೆ ನ್ಯಾಯಾಲಯವು ಆರೋಪಿಗಳನ್ನು ಅ. 7ರ ವರೆಗೆ ಎನ್‌ಸಿಬಿ ವಶಕ್ಕೆ ನೀಡಿತ್ತು. ಈ ಅವಧಿಯನ್ನು ವಿಸ್ತರಿಸುಂತೆ ಎನ್‌ಸಿಬಿ ಅಧಿಕಾರಿಗಳು ಕೋರಿದ್ದರು. ಆದರೆ, ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.