ಸಿರಪ್
ಸೋನ್‌ಭಂದ್ರ: ಪೊಲೀಸ್ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ಜಂಟಿ ತಂಡವು ₹3 ಕೋಟಿ ಮೌಲ್ಯದ ಕೆಮ್ಮಿನ ನಿಷೇಧಿತ ಸಿರಪ್ ಅನ್ನು ವಶಕ್ಕೆ ಪಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಅವರು, ‘ಗಜಿಯಾಬಾದ್‌ನಿಂದ ಜಾರ್ಖಂಡ್‌ಗೆ ಸಾಗಿಸಲಾಗುತ್ತಿದ್ದ 1.19 ಲಕ್ಷ ಬಾಟಲಿ ನಿಷೇಧಿತ ಸಿರಪ್ ಅನ್ನು ಉತ್ತರ ಪ್ರದೇಶದ ಸೋನ್‌ಭಂದ್ರ ಜಿಲ್ಲೆಯ ಚುರ್ಕ್ ಸಮೀಪ ಶನಿವಾರ ಸಂಜೆ ವಶಕ್ಕೆ ಪಡೆಯಲಾಯಿತು’ ಎಂದು ತಿಳಿಸಿದರು.
ಹೇಮಂತ್ ಪಾಲ್, ಬ್ರಜ್‌ಮೋಹನ್ ಶಿವ್‌ಹರೇ, ರಾಮಗೋಪಾಲ್ ಧಕಡ್ ಬಂಧಿತ ಆರೋಪಿಗಳು. ಇವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.