ADVERTISEMENT

ಮಿಜೋರಾಂನಲ್ಲಿ ಕಳ್ಳಸಾಗಣೆ; ₹350 ಕೋಟಿ ಮೌಲ್ಯದ ಮಾದಕವಸ್ತು ಜಪ್ತಿ, ಬಂಧನ

ಪಿಟಿಐ
Published 3 ಆಗಸ್ಟ್ 2025, 11:09 IST
Last Updated 3 ಆಗಸ್ಟ್ 2025, 11:09 IST
<div class="paragraphs"><p>ಪ್ರಾತಿನಿಧಿಕ ಚಿತ್ರ&nbsp;</p></div>

ಪ್ರಾತಿನಿಧಿಕ ಚಿತ್ರ 

   

ಐಜ್ವಾಲ್: ಮಿಜೋರಾಂ ಪೊಲೀಸರು ನಡೆಸಿದ ಅತಿ ದೊಡ್ಡ ಕಾರ್ಯಾಚರಣೆಯಲ್ಲಿ ಸುಮಾರು ₹350 ಕೋಟಿ ಮೌಲ್ಯದ ಕ್ರಿಸ್ಟಲ್‌ ಮೆಥಾಂಫೆಟ್‌ಮೈನ್‌ ಹಾಗೂ ಹೆರಾಯಿನ್‌ ವಶ‍ಪಡಿಸಿಕೊಂಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಐಜ್ವಾಲ್‌ನಲ್ಲಿರುವ ಮಾದಕವಸ್ತು ನಿಗ್ರಹ ವಿಶೇಷ ಪೊಲೀಸ್‌ ಠಾಣೆ ಸಿಬ್ಬಂದಿ ಹಾಗೂ ಅಪರಾಧ ತನಿಖಾ ಇಲಾಖೆಯ (ವಿಶೇಷ ವಿಭಾಗ) ಸಿಬ್ಬಂದಿ ಆಗಸ್ಟ್‌ 1ರಂದು ಈ ಕಾರ್ಯಾಚರಣೆ ನಡೆಸಿದ್ದರು.

ADVERTISEMENT

ಐಜ್ವಾಲ್‌ಗೆ ತೆರಳುತ್ತಿದ್ದ ಲಾರಿಯೊಂದನ್ನು ಒಂದನ್ನು ತಡೆದು ಪರಿಶೀಲಿಸಿದಾಗ ₹300 ಕೋಟಿ ಮೌಲ್ಯದ 20.304 ಕೆಜಿ ಕ್ರಿಸ್ಟಲ್‌ ಮೆಥಾಂಫೆಟಮೈನ್‌ ಹಾಗೂ 128 ಸಾಬೂನು ಡಬ್ಬಿಗಳಲ್ಲಿ ತುಂಬಿಸಿದ್ದ ₹49.56 ಕೋಟಿ ಮೌಲ್ಯದ 1.652 ಕೆಜಿ ಹೆರಾಯಿನ್‌ ಪತ್ತೆಯಾಗಿದೆ.

ಈ ಮಾದಕವಸ್ತುಗಳನ್ನು ಸಾಗಿಸುತ್ತಿದ್ದ ಆರೋಪದಲ್ಲಿ ಚಾಲಕ ಬಿ. ಲಲ್ತಾಜುವಾಲಾ ಎಂಬವನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.