ಜೆಜೆಪಿ ಮುಖ್ಯಸ್ಥ ದುಷ್ಯಂತ್ ಸಿಂಗ್ ಚೌಟಾಲಾ ಜೊತೆ ಎಎಸ್‌ಪಿ ನಾಯಕ ಚಂದ್ರಶೇಖರ ಆಜಾದ್
–ಪಿಟಿಐ ಚಿತ್ರ
ಚಂಡೀಗಢ: ಹರಿಯಾಣದ ಜನನಾಯಕ ಜನತಾ ಪಕ್ಷ(ಜೆಜೆಪಿ) ಹಾಗೂ ಆಜಾದ್ ಸಮಾಜ್ ಪಕ್ಷ(ಎಎಸ್‌ಪಿ) ಮೈತ್ರಿ ಕೂಟವು ವಿಧಾನಸಭೆ ಚುನಾವಣೆಗೆ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದೆ. ಮೊದಲ ಪಟ್ಟಿಯಲ್ಲಿ ಜೆಜೆಪಿಯ 15 ಮಂದಿ, ಎಎಸ್‌ಪಿಯಿಂದ ನಾಲ್ವರಿಗೆ ಟಿಕೆಟ್ ನೀಡಲಾಗಿದೆ.
ಸದ್ಯ ಉಚಾನಾ ಕ್ಷೇತ್ರದ ಹಾಲಿ ಶಾಸಕರೂ ಆಗಿರುವ ಮಾಜಿ ಉಪಮುಖ್ಯಮಂತ್ರಿ ದುಷ್ಯಂತ್ ಸಿಂಗ್ ಚೌಟಾಲಾ ಅವರು ಈ ಬಾರಿಯೂ ಇದೇ ಕ್ಷೇತ್ರದಲ್ಲಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ. ದುಷ್ಯಂತ್ ಅವರ ಕಿರಿಯ ಸಹೋದರ ದಿಗ್ವಿಜಯ್ ಸಿಂಗ್ ಅವರು ಡಬವಾಲಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ಜೆಜೆಪಿ ಮತ್ತು ಎಎಸ್‌ಪಿ ಪಕ್ಷಗಳು ಮುಂಬರುವ ವಿಧಾನಸಭಾ ಚುನಾವಣೆಗೆ ಚುನಾವಣಾಪೂರ್ವ ಮೈತ್ರಿ ಮಾಡಿಕೊಳ್ಳುವುದಾಗಿ ಈಚೆಗೆ ಘೋಷಣೆ ಮಾಡಿದ್ದವು. 90 ಸ್ಥಾನಗಳ ಪೈಕಿ ಜೆಜೆಪಿ 70ರಲ್ಲಿ ಹಾಗೂ ಎಎಸ್‌ಪಿ 20 ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಒಪ್ಪಂದವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.