ADVERTISEMENT

ಸುಂಕ ರಹಿತ ಹತ್ತಿ ಆಮದು: ಡಿಸೆಂಬರ್‌ವರೆಗೆ ವಿಸ್ತರಿಸಿದ ಕೇಂದ್ರ

ಪಿಟಿಐ
Published 28 ಆಗಸ್ಟ್ 2025, 4:44 IST
Last Updated 28 ಆಗಸ್ಟ್ 2025, 4:44 IST
<div class="paragraphs"><p>ಹತ್ತಿ (ಪ್ರಾತಿನಿಧಿಕ ಚಿತ್ರ)</p></div>

ಹತ್ತಿ (ಪ್ರಾತಿನಿಧಿಕ ಚಿತ್ರ)

   

ನವದೆಹಲಿ: ಅಮೆರಿಕವು ಭಾರತದ ಉತ್ಪನ್ನಗಳ ಮೇಲೆ ಶೇ 50ರಷ್ಟು ಸುಂಕವನ್ನು ವಿಧಿಸಿದ ಬೆನ್ನಲ್ಲೇ ಜವಳಿ ರಫ್ತುದಾರರನ್ನು ಬೆಂಬಲಿಸಲು, ಭಾರತ ಸರ್ಕಾರ ಸುಂಕ ರಹಿತ ಹತ್ತಿಯ ಆಮದನ್ನು ಇನ್ನೂ ಮೂರು ತಿಂಗಳು (ಡಿ.31 ರವರೆಗೆ) ವಿಸ್ತರಿಸಿ ಗುರುವಾರ ಅದೇಶಿಸಿದೆ.

ಆ.19 ರಿಂದ ಸೆ.30 ರವರೆಗೆ ಹತ್ತಿ ಆಮದಿನ ಮೇಲೆ ಸುಂಕ ವಿನಾಯಿತಿಯನ್ನು ನೀಡಿ ಹಣಕಾಸು ಸಚಿವಾಲಯವು ಆ. 18ರಂದು ಆದೇಶಿಸಿತ್ತು. ಇದೀಗ ಇನ್ನೂ ಮೂರು ತಿಂಗಳು ವಿಸ್ತರಿಸಿ ಸೆ.30ರಿಂದ ಡಿ.31ರವರೆಗೆ ವಿನಾಯಿತಿ ನೀಡಿದೆ.

ADVERTISEMENT

ಆ.27ರಿಂದ ಅನ್ವಯವಾಗುವಂತೆ ಅಮೆರಿಕ ಭಾರತದ ಉತ್ಪನ್ನಗಳ ಮೇಲೆ ಶೇ 50ರಷ್ಟು ಸುಂಕವನ್ನು ಜಾರಿಗೊಳಿಸಿದೆ. ಇದರಲ್ಲಿ ಜವಳಿ, ಆಭರಣ, ರತ್ನದ ಆಭರಣ, ಲೆದರ್‌ ಉತ್ಪನ್ನಗಳೂ ಸೇರಿವೆ. 

ಈಗ ಭಾರತ ಸರ್ಕಾರ ಸುಂಕ ರಹಿತ ಹತ್ತಿ ಆಮದಿಗೆ ಕ್ರಮ ಕೈಗೊಂಡಿರುವುದರಿಂದ ದೇಶೀಯ ಮಾರುಕಟ್ಟೆಯಲ್ಲಿ ಕಚ್ಚಾ ಹತ್ತಿಯ ಲಭ್ಯತೆಯನ್ನು ಹೆಚ್ಚಿಸುತ್ತದೆ. ಜತೆಗೆ ಹತ್ತಿ ಬೆಲೆಯನ್ನು ಸ್ಥಿರಗೊಳಿಸುತ್ತದೆ. ಈ ಮೂಲಕ ಸಿದ್ಧಪಡಿಸಿದ ಜವಳಿ ಉತ್ಪನ್ನಗಳ ಮೇಲಿನ ಹಣದುಬ್ಬರದ ಒತ್ತಡವನ್ನು ಕಡಿಮೆ ಮಾಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.