ADVERTISEMENT

ಹಕ್ಕಿಜ್ವರ: ಮೊಟ್ಟೆ, ಕೋಳಿ ಮಾಂಸ ಸೇವನೆ ಸುರಕ್ಷಿತ ಎಂದ ಕೇಂದ್ರ ಸರ್ಕಾರ

​ಪ್ರಜಾವಾಣಿ ವಾರ್ತೆ
Published 17 ಜನವರಿ 2021, 15:52 IST
Last Updated 17 ಜನವರಿ 2021, 15:52 IST
ಕೋಳಿ, ಮೊಟ್ಟೆ ತಿನ್ನಲು ಅಡ್ಡಿಯಿಲ್ಲ..
ಕೋಳಿ, ಮೊಟ್ಟೆ ತಿನ್ನಲು ಅಡ್ಡಿಯಿಲ್ಲ..   

ನವದೆಹಲಿ: ಹಕ್ಕಿಜ್ವರ ಕುರಿತ ಭೀತಿ ಮತ್ತು ಗೊಂದಲ ನಿವಾರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಹಕ್ಕಿಜ್ವರ ವರದಿಯಾಗಿರುವ ಪ್ರದೇಶಗಳಲ್ಲಿ ಹೊರತುಪಡಿಸಿ, ಇತರ ತಾಣಗಳಲ್ಲಿ ಕೋಳಿ ಮಾಂಸ ಮತ್ತು ಮೊಟ್ಟೆ ಮಾರಾಟದ ಮೇಲೆ ವಿಧಿಸಲಾಗಿರುವ ನಿರ್ಬಂಧ ತೆರವುಗೊಳಿಸಬೇಕು ಎಂದು ಕೇಂದ್ರ ಮೀನುಗಾರಿಕೆ ಸಚಿವಾಲಯ ಹೇಳಿದೆ. ಸರಿಯಾದ ಬೇಯಿಸಿದ ಕೋಳಿ ಮಾಂಸ ಮತ್ತು ಮೊಟ್ಟೆ ಸೇವನೆಗೆ ಸೂಕ್ತವಾಗಿದ್ದು, ಆಧಾರರಹಿತ ಗಾಳಿಸುದ್ದಿ ನಂಬದೆ, ಗೊಂದಲ ನಿವಾರಿಸಿಕೊಳ್ಳಿ ಎಂದು ಜನರಿಗೆ ಸಚಿವಾಲಯ ಸೂಚನೆ ನೀಡಿದೆ.

ಕೋಳಿ, ಮೊಟ್ಟೆ ತಿನ್ನಲು ಅಡ್ಡಿಯಿಲ್ಲ..

ರಾಷ್ಟ್ರದ ವಿವಿಧೆಡೆ ಹಕ್ಕಿಜ್ವರ ಪ್ರಕರಣ ವರದಿ ಮತ್ತು ಪಕ್ಷಿಗಳ ಸಾವಿನ ಬಳಿಕ ಜನರಲ್ಲಿ ಭೀತಿಯುಂಟಾಗಿದೆ. ಅಲ್ಲದೆ, ಕೋಳಿ ಮಾಂಸ ಮತ್ತು ಮೊಟ್ಟೆ ಮೇಲೆ ಹಲವು ರಾಜ್ಯಗಳಲ್ಲಿ ಮಾರಾಟ ನಿರ್ಬಂ‌ಧ ಕೂಡ ಹೇರಲಾಗಿದೆ. ಆದರೆ ಸರಿಯಾದ ರೀತಿಯಲ್ಲಿ ಶುದ್ಧೀಕರಿಸಿ ಬೇಯಿಸಿದ ಕೋಳಿಮಾಂಸ ಮತ್ತು ಮೊಟ್ಟೆ ತಿನ್ನುವುದರಿಂದ, ಯಾವುದೇ ಸಮಸ್ಯೆಯಿಲ್ಲ ಎಂದು ಸಚಿವಾಲಯ ಹೇಳಿದೆ.

ADVERTISEMENT

ಸರಿಯಾಗಿ ಬೇಯಿಸಿದ ಕೋಳಿ ಮಾಂಸ ಸುರಕ್ಷಿತ

70 ಡಿಗ್ರಿಗೂ ಅಧಿಕ ತಾಪಮಾನದಲ್ಲಿ ಮತ್ತು ಕನಿಷ್ಠ 30 ನಿಮಿಷ ಬೇಯಿಸಿದ ಕೋಳಿಮಾಂಸ ಸುರಕ್ಷಿತ. ಅದರ ಸೇವನೆಯಿಂದ ಯಾವುದೇ ಸಮಸ್ಯೆಯಾಗುವುದಿಲ್ಲ. ಅಲ್ಲದೆ, ಮೊಟ್ಟೆ ಸೇವನೆ ಕೂಡ ಸುರಕ್ಷಿತ. ಜನರು ವದಂತಿಗಳಿಗೆ ಕಿವಿಗೊಡಬಾರದು ಎಂದು ಸರ್ಕಾರ ತಿಳಿಸಿದೆ.

ಸರ್ಕಾರದ ಜಾಗೃತಿ

ಮಹಾರಾಷ್ಟ್ರ, ಮಧ್ಯ ಪ್ರದೇಶ, ಗುಜರಾತ್, ಉತ್ತರಾಖಂಡ ಮತ್ತು ಉತ್ತರ ಪ್ರದೇಶದ ಕೆಲ ಜಿಲ್ಲೆಗಳಲ್ಲಿ ಹಕ್ಕಿಜ್ವರ ಪ್ರಕರಣ ವರದಿಯಾಗಿತ್ತು. ಆದರೆ ಜನರಲ್ಲಿ ಗೊಂದಲ ನಿವಾರಿಸಲು ಕೇಂದ್ರ ಸರ್ಕಾರದ ಸೂಚನೆಯಂತೆ, ರಾಜ್ಯ ಸರ್ಕಾರ ವಿವಿಧ ಮಾಧ್ಯಮಗಳ ಮೂಲಕ ಜಾಹೀರಾತು ನೀಡಿ ಜಾಗೃತಿ ಮೂಡಿಸಲು ಮುಂದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.