ADVERTISEMENT

ಟಿಕೆಟ್‌ನಲ್ಲಿ ಮೋದಿ ಭಾವಚಿತ್ರ: ನಾಗರಿಕ ವಿಮಾನಯಾನ, ರೈಲ್ವೆ ಸಚಿವಾಲಯಕ್ಕೆ ನೋಟಿಸ್

ನೀತಿ ಸಂಹಿತೆ ಉಲ್ಲಂಘನೆಗೆ ಚುನಾವಣಾ ಆಯೋಗದಿಂದ ಕ್ರಮ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2019, 9:26 IST
Last Updated 30 ಮಾರ್ಚ್ 2019, 9:26 IST
   

ನವದೆಹಲಿ:ರೈಲು ಟಿಕೆಟ್‌ ಹಾಗೂ ಏರ್‌ ಇಂಡಿಯಾ ಬೋರ್ಡಿಂಗ್ ಪಾಸ್‌ಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಪ್ರಕಟಿಸಿರುವುದಕ್ಕೆ ರೈಲ್ವೆ, ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಚುನಾವಣಾ ಆಯೋಗ ನೋಟಿಸ್ ನೀಡಿದೆ. ಇಂದೇ ಉತ್ತರ ನೀಡುವಂತೆಯೂ ಸೂಚಿಸಿದೆ.

ಮಾರ್ಚ್‌ 10ರಿಂದ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಟಿಕೆಟ್‌ಗಳಲ್ಲಿ ಮೋದಿ ಭಾವಚಿತ್ರ ಇರುವುದಕ್ಕೆ ಸಂಬಂಧಿಸಿ ಆಯೋಗವು ಮಾರ್ಚ್‌ 27ರಂದು ರೈಲ್ವೆ ಇಲಾಖೆಯ ವಿವರಣೆ ಕೇಳಿತ್ತು. ಈ ಮಧ್ಯೆ, ಏರ್‌ ಇಂಡಿಯಾ ಬೋರ್ಡಿಂಗ್ ಪಾಸ್‌ಗಳಲ್ಲಿ ಮೋದಿ ಮತ್ತು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಭಾವಚಿತ್ರ ಇರುವುದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಬಳಿಕ ಮಾರ್ಚ್ 25ರಂದುಬೋರ್ಡಿಂಗ್ ಪಾಸ್‌ಗಳನ್ನು ಹಿಂಪಡೆಯಲಾಗಿತ್ತು.

ಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಶುಕ್ರವಾರ‘ಮೈ ಭಿ ಚೌಕೀದಾರ್’ ಎಂಬ ಜಾಹೀರಾತು ಇರುವ ಲೋಟಗಳಲ್ಲಿಟೀ ವಿತರಿಸಲಾಗಿತ್ತು. ಇದನ್ನುಪ್ರಯಾಣಿಕರೊಬ್ಬರು ಆಕ್ಷೇಪಿಸಿದ್ದರು.ಆ ಲೋಟದ ಚಿತ್ರವನ್ನು ಟ್ವಿಟರ್‌ನಲ್ಲಿ ಪ್ರಕಟಿಸಿದ್ದರು. ಈ ಚಿತ್ರ ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ವೈರಲ್ ಆಗಿತ್ತು. ಬಳಿಕಆ ಟೀ ಲೋಟಗಳ ಸರಬರಾಜನ್ನು ಸ್ಥಗಿತಗೊಳಿಸಿದ್ದಾಗಿಯೂ ಅದನ್ನುಪೂರೈಸಿದ ಗುತ್ತಿಗೆದಾರನಿಗೆ ₹1 ಲಕ್ಷ ದಂಡ ವಿಧಿಸಲಾಗಿದೆ ಎಂದೂ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.