ಕೋಲ್ಕತ್ತ: ಪಶ್ಚಿಮ ಬಂಗಾಳದ ಸಚಿವ ಸುಜಿತ್ ಬೋಸ್‌ಗೆ ಸಂಬಂಧಿಸಿದ ಆಸ್ತಿಗಳು ಸೇರಿದಂತೆ ಕೋಲ್ಕತ್ತದ ಏಳು ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಶುಕ್ರವಾರ ಶೋಧ ಕಾರ್ಯಾಚರಣೆ ನಡೆಸಿದರು.
ಪುರಸಭೆಗಳ ಸಿಬ್ಬಂದಿ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ತನಿಖೆಗೆ ಸಂಬಂಧಿಸಿದಂತೆ ಈ ಶೋಧ ನಡೆದಿದ್ದು, ಸಚಿವರ ಕಚೇರಿಯಿಂದ ಒಎಂಆರ್ ಶೀಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಾಲ್ಟ್ ಲೇಕ್‌ನಲ್ಲಿರುವ ಸಚಿವರ ನಿವಾಸ– ಗೃಹ ಕಚೇರಿ, ನಾಗೇರ್ ಬಜಾರ್ ಪ್ರದೇಶದ ಕೌನ್ಸಿಲರ್ ಮನೆ, ದಕ್ಷಿಣ ಡುಮ್ ಡುಮ್ ಪುರಸಭೆಯ ಮಾಜಿ ಅಧಿಕಾರಿಗಳ ಮನೆಯಲ್ಲೂ ಇ.ಡಿ ತಂಡಗಳು ಶೋಧ ನಡೆಸಿವೆ ಎಂದು ಅವರು ಹೇಳಿದರು.
ಕೇಂದ್ರ ಕೋಲ್ಕತ್ತದ ಥಂತಾನಿಯಾ ಕಾಲಿಬಾರಿ ಪ್ರದೇಶದ ಮನೆಯೊಂದರ ಮೇಲೆ ಮತ್ತು ದಕ್ಷಿಣ ಭಾಗದ ನ್ಯೂ ಅಲಿಪೋರ್‌ನಲ್ಲಿರುವ ವಕೀಲರ ನಿವಾಸದ ಮೇಲೂ ದಾಳಿ ನಡೆದಿದೆ ಎಂದಿದ್ದಾರೆ.
‘ಭ್ರಷ್ಟಾಚಾರ ಆರೋಪಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸುವ ಗುರಿಯೊಂದಿಗೆ ಈ ದಾಳಿ ನಡೆದಿದೆ. ಸಚಿವರ ಕಚೇರಿಯು ದಾಳಿ ನಡೆಸಬೇಕಾದ ಸ್ಥಳಗಳ ಪಟ್ಟಿಯಲ್ಲಿ ಇರಲಿಲ್ಲ’ ಎಂದು ಇ.ಡಿ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಸಚಿವರ ಒಡೆತನದ ಸಾಲ್ಟ್ ಲೇಕ್ ಪ್ರದೇಶದಲ್ಲಿನ ರೆಸ್ಟೊರೆಂಟ್‌ನ ವ್ಯವಸ್ಥಾಪಕರನ್ನು ಪ್ರಶ್ನಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.