ADVERTISEMENT

ಚುನಾವಣಾ ಸಮಯದಲ್ಲೇ ಏಕೆ ವಿರೋಧ ಪಕ್ಷಗಳ ನಾಯಕರ ಮೇಲೆ ಇ.ಡಿ ದಾಳಿ ಆಗೋದು? ಸಿಬಲ್

ಪಿಟಿಐ
Published 10 ಜನವರಿ 2026, 14:14 IST
Last Updated 10 ಜನವರಿ 2026, 14:14 IST
<div class="paragraphs"><p>ಕಪಿಲ್ ಸಿಬಲ್</p></div>

ಕಪಿಲ್ ಸಿಬಲ್

   

ಪಿಟಿಐ

ನನವದೆಹಲಿ: ಚುನಾವಣೆಗಳ ಸಮಯದಲ್ಲಿ ಜಾರಿ ಜಾರಿ ನಿರ್ದೇಶನಾಲಯ (ಇ.ಡಿ) ವಿರೋಧ ಪಕ್ಷಗಳ ನಾಯಕರ ವಿರುದ್ಧ ಏಕೆ ಕ್ರಮಕೈಗೊಳ್ಳುತ್ತದೆ ಎಂದು ಸಂಸದ ಕಪಿಲ್‌ ಸಿಬಲ್‌ ಶನಿವಾರ ಹೇಳಿದ್ದಾರೆ.

ADVERTISEMENT

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪಶ್ಚಿಮ ಬಂಗಾಳದಲ್ಲಿ ಇ.ಡಿ ನಡೆಸಿದ ದಾಳಿಯ ಹಿಂದಿನ ಉದ್ದೇಶ ಬಹಿರಂಗವಾಗಿದೆ. ಇದು ಕೇವಲ ವಿರೋಧ ಪಕ್ಷದ ನಾಯಕರ ಮೇಲಿನ ಕಿರುಕುಳವಾಗಿದೆ. ವಿಧಾನಸಭಾ ಚುನಾವಣೆಯ ಸಮಯದಲ್ಲಿ ಜಾರ್ಖಂಡ್‌ನಲ್ಲಿ ಹೇಮಂತ್ ಸೊರೇನ್ ಮತ್ತು ಬಿಹಾರದಲ್ಲಿ ಲಾಲು ಪ್ರಸಾದ್ ಮತ್ತು ತೇಜಸ್ವಿ ಯಾದವ್ ವಿರುದ್ಧ ತನಿಖಾ ಸಂಸ್ಥೆಯ ಕ್ರಮವು ಉತ್ತಮ ಉದಾಹರಣೆಯಾಗಿದೆ ಎಂದು ಹೇಳಿದ್ದಾರೆ.

ತನಿಖಾ ಸಂಸ್ಥೆಗಳ ಅಧಿಕಾರ ವ್ಯಾಪ್ತಿಯ ಬಗ್ಗೆ ಬಾಕಿ ಇರುವ ಪರಿಶೀಲನಾ ಅರ್ಜಿಗಳನ್ನು ವಿಚಾರಣೆ ನಡೆಸುವಂತೆ ಸುಪ್ರೀಂಕೋರ್ಟ್‌ ಅನ್ನು ಸಿಬಲ್ ಕೋರಿದ್ದಾರೆ.

ಈ ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಸುಳ್ಳು ಮಾಹಿತಿಯ ಆಧಾರದ ಮೇಲೆ ಯಾವುದೇ ರಾಜಕೀಯ ಪಕ್ಷ ಅಥವಾ ನಾಯಕನ ವಿರುದ್ಧ ಕಾನೂನು ಕ್ರಮ ಜರುಗಿಸಿಲ್ಲ. 2004 ಮತ್ತು 2014ರ ನಡುವೆ ಜಾರಿ ನಿರ್ದೇಶನಾಲಯ ಆ ರೀತಿ ಮಾಡಲು ಬಿಟ್ಟಿರಲಿಲ್ಲ ಎಂದು ಸಿಬಲ್‌ ತಿಳಿಸಿದ್ದಾರೆ.

ಇ.ಡಿ ದೇವರಂತೆ ಸರ್ವವ್ಯಾಪಿ. ಇ.ಡಿ ಕೇಂದ್ರ ಬಿಜೆಪಿ ಸರ್ಕಾರದ ದೇವರು. ಹೀಗಾಗಿ ಅವರು ಏನು ಬೇಕಾದರೂ ಮಾಡಬಹುದು. ಸಿಬಿಐ ಕೂಡ ಹಾಗೆಯೇ ಎಂದು ಸಿಬಲ್ ಟೀಕಿಸಿದ್ದಾರೆ.

ಜಾರಿ ನಿರ್ದೇಶನಾಲಯವನ್ನು ರಚಿಸಿದಾಗ, ಅದು ದೇಶದ ಯಾವುದೇ ಸ್ಥಳಕ್ಕೆ, ಯಾವುದೇ ಸಮಯದಲ್ಲಿ ಹೋಗಬಹುದಾದ ಸರ್ವವ್ಯಾಪಿ ವಿಚಾರಣೆ ಸಂಸ್ಥೆಯಾಗಿದೆ ಎಂದು ನಮಗೆ ತಿಳಿದಿರಲಿಲ್ಲ. ಈ ಸಂಸ್ಥೆಗಳು ಸರ್ಕಾರಗಳ ಮೇಲೆ ದಾಳಿ ಮಾಡಬಹುದು, ರಾಜಕೀಯ ನಾಯಕರ ನಿವಾಸ ಮತ್ತು ಕಚೇರಿಗಳ ದಾಳಿ ಮಾಡಿ, ಅವರ ಸರ್ಕಾರಗಳನ್ನು ಬೀಳಿಸಬಹುದಾದ ಅಧಿಕಾರ ಹೊಂದಿದೆಯೇ ಇಲ್ಲವೋ ತಿಳಿದಿಲ್ಲ ಎಂದು ಸಿಬಲ್‌ ಕಿಡಿಕಾರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.