ADVERTISEMENT

ಹಣ ಅಕ್ರಮ ವರ್ಗಾವಣೆ: ವಿಚಾರಣೆಗೆ ಹಾಜರಾಗಲು ಕೆಟಿಆರ್‌ಗೆ ಇ.ಡಿ ನೋಟಿಸ್

ಪಿಟಿಐ
Published 28 ಡಿಸೆಂಬರ್ 2024, 6:14 IST
Last Updated 28 ಡಿಸೆಂಬರ್ 2024, 6:14 IST
ಕೆ.ಟಿ. ರಾಮರಾವ್ (ಚಿತ್ರ: @KTRTRS)
ಕೆ.ಟಿ. ರಾಮರಾವ್ (ಚಿತ್ರ: @KTRTRS)   

ಹೈದರಾಬಾದ್‌: ಹೈದರಾಬಾದ್‌ ಫಾರ್ಮುಲ–ಇ ರೇಸ್‌ನಲ್ಲಿ ನಡೆದಿದೆ ಎನ್ನಲಾದ ಹಣ ಅಕ್ರಮ ವರ್ಗಾವಣೆ ಸಂಬಂಧ ದಾಖಲಾಗಿರುವ ದೂರಿನಲ್ಲಿ ವಿಚಾರಣೆಗೆ ಹಾಜರಾಗುವಂತೆ ಭಾರತ ರಾಷ್ಟ್ರೀಯ ಸಮಿತಿ (ಬಿಆರ್‌ಎಸ್‌) ನಾಯಕ ಕೆ.ಟಿ. ರಾಮ ರಾವ್‌ ಹಾಗೂ ಇತರರಿಗೆ ಜಾರಿ ನಿರ್ದೇಶನಾಲಯ ನೋಟಿಸ್ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅವ್ಯವಹಾರ ಸಂಬಂಧ ಕಳೆದ ವಾರ ಜಾರಿ ನಿರ್ದೇಶನಾಲಯವು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ ವಿವಿಧ ಕಲಂಗಳಡಿ ಎಫ್ಐಆರ್ ದಾಖಲಿಸಿಕೊಂಡಿತ್ತು. ಜ. 7ರಂದು ವಿಚಾರಣೆಗೆ ಹಾಜರಾಗುವಂತೆ ಕೆಟಿಆರ್‌ಗೆ ನೀಡಿದ ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಹಿರಿಯ ಐಎಸ್‌ನ ಅಧಿಕಾರಿ ಅರವಿಂದ ಕುಮಾರ್‌, ಹೈದರಾಬಾದ್‌ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಮುಖ್ಯ ಎಂಜಿನಿಯರ್ ಬಿ.ಎಲ್‌.ಎನ್ ರೆಡ್ಡಿ ಅವರಿಗೆ ಕ್ರಮವಾಗಿ ಜನವರಿ 2 ಹಾಗೂ 3ರಂದು ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ.

ADVERTISEMENT

2023ರಲ್ಲಿ ಬಿ.ಆರ್‌.ಎಸ್ ಪಕ್ಷ ಅಧಿಕಾರದ್ದಲ್ಲಿದ್ದಾಗ ಹೈದರಾಬಾದ್‌ನಲ್ಲಿ ಫಾರ್ಮುಲ–ಇ ರೇಸ್ ನಡೆಸಲು ಅನುಮತಿ ಇಲ್ಲದೆ ₹55 ಕೋಟಿ ಪಾವತಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.