ಬಂಧನ
(ಪ್ರಾತಿನಿಧಿಕ ಚಿತ್ರ)
ಇಂಫಾಲ್: ಮಣಿಪುರದ ವಿವಿಧ ನಿಷೇಧಿತ ಸಂಘಟನೆಗಳ ಸದಸ್ಯರಾಗಿರುವ 8 ಮಂದಿ ಬಂಡುಕೋರರನ್ನು ಬಂಧಿಸಿರುವುದಾಗಿ ಪೊಲೀಸರು ಶನಿವಾರ ತಿಳಿಸಿದ್ದಾರೆ.
ನಿಷೇಧಿತ ಸಂಘಟನೆ ವಿಸಿ–ರೆಡ್ ಆರ್ಮಿಯ ಸಕ್ರಿಯ ಸದಸ್ಯನಾಗಿದ್ದ ಒಬ್ಬ ವ್ಯಕ್ತಿಯನ್ನು ಪಶ್ಚಿಮ ಇಂಫಾಲದ ಮಹಾರ್ಬಿ ಎಂಬಲ್ಲಿ ಶುಕ್ರವಾರ ಬಂಧಿಸಲಾಗಿದೆ. ಸೊಷಿಯಲಿಸ್ಟ್ ರೆವಲ್ಯೂಷನ್ ಪಾರ್ಟಿಯ (ಎಸ್ಒಆರ್‌ಇಪಿಎ) ಇಬ್ಬರನ್ನು ಕಾಕ್ಚಿಂಗ್ ಜಿಲ್ಲೆಯ ಉಮಾತೆಲ್ ಎಂಬಲ್ಲಿ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಕೆಸಿಪಿ (ಪಿಡಬ್ಯೂಜಿ) ಸಂಘಟನೆಯ ಮೂವರು ಸದಸ್ಯರನ್ನು ಪಶ್ಚಿಮ ಇಂಫಾಲದಲ್ಲಿ ಮಂಗಳವಾರ ಹಾಗೂ ಕೆಸಿಪಿ (ತೈಬಾಂಗ್ಬಾ) ಸಂಘಟನೆಯ ಇಬ್ಬರನ್ನು ಇಂಫಾಲ್ ಪೂರ್ವ ಜಿಲ್ಲೆಯ ಗ್ರಾಮವೊಂದರಲ್ಲಿ ಶುಕ್ರವಾರ ಬಂಧಿಸಲಾಗಿದೆ ಎಂದೂ ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.