ADVERTISEMENT

ಮಹಾರಾಷ್ಟ್ರ ಸರ್ಕಾರ ರಚನೆ: DCM ಆಗಿ ಏಕನಾಥ ಶಿಂದೆ, ಅಜಿತ್ ಪವಾರ್‌ ಪ್ರಮಾಣ ವಚನ

ಪಿಟಿಐ
Published 5 ಡಿಸೆಂಬರ್ 2024, 10:30 IST
Last Updated 5 ಡಿಸೆಂಬರ್ 2024, 10:30 IST
<div class="paragraphs"><p>ದೇವೇಂದ್ರ ಫಡಣವೀಸ್‌, ಏಕಾನಥ ಶಿಂದೆ, ಅಜಿತ್‌ ಪವಾರ್‌</p></div>

ದೇವೇಂದ್ರ ಫಡಣವೀಸ್‌, ಏಕಾನಥ ಶಿಂದೆ, ಅಜಿತ್‌ ಪವಾರ್‌

   

ಪಿಟಿಐ ಚಿತ್ರ

ಮುಂಬೈ: ಶಿವಸೇನಾ ಅಧ್ಯಕ್ಷ ಏಕನಾಥ ಶಿಂದೆ ಅವರೇ ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಪಕ್ಷದ ನಾಯಕ ಉದಯ ಸಮಂತ್ ಘೋಷಿಸಿದ್ದಾರೆ.

ADVERTISEMENT

ಬಿಜೆಪಿ ನಾಯಕ ದೇವೇಂದ್ರ ಫಡಣವೀಸ್‌ ಅವರು ಮುಖ್ಯಮಂತ್ರಿಯಾಗಿ ಇಂದು ಸಂಜೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ವೇಳೆ ಶಿಂದೆ ಮತ್ತು ಎನ್‌ಸಿಪಿ ನಾಯಕ ಅಜಿತ್‌ ಪವಾರ್‌ ಅವರು ಉಪಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹಾಜರಿರಲಿದ್ದಾರೆ ಎಂದು ಉದಯ ಅವರು ಹೇಳಿದ್ದಾರೆ. 

ಈ ಹಿಂದಿನ ಮಹಾಯುತಿ ಸರ್ಕಾರದಲ್ಲಿ ಶಿಂದೆ ಅವರು ಮುಖ್ಯಮಂತ್ರಿಯಾಗಿದ್ದ ಕಾರಣ ಈಗ ಬಿಜೆಪಿಗೆ ಅಧಿಕಾರ ನೀಡಲು ಇಚ್ಚಿಸುವುದಿಲ್ಲ ಎನ್ನಲಾಗಿತ್ತು. ಆದರೆ ಈಗ ಶಿಂದೆ ಉಪಮುಖ್ಯಮಂತ್ರಿಯಾಗಲು ಒಪ್ಪಿಕೊಂಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.