ADVERTISEMENT

‘ಇ–ಮತದಾನ’ ಸಿದ್ಧತೆಗೆ ಐಐಟಿ ಮದ್ರಾಸ್‌ ನೆರವು

ಪಿಟಿಐ
Published 26 ಮಾರ್ಚ್ 2021, 16:47 IST
Last Updated 26 ಮಾರ್ಚ್ 2021, 16:47 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಹೈದರಾಬಾದ್‌: ವಿದ್ಯುನ್ಮಾನ ಮತದಾನ ವ್ಯವಸ್ಥೆಗಾಗಿ ಬ್ಲಾಕ್‌ಚೈನ್ ತಂತ್ರಜ್ಞಾನ ಅಳವಡಿಕೆ ಸಂಬಂಧ ಐಐಟಿ– ಮದ್ರಾಸ್‌ ಜೊತೆಗೂಡಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಭಾರತ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ಶುಕ್ರವಾರ ಹೇಳಿದರು.

ಇಲ್ಲಿನ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ರಾಷ್ಟ್ರೀಯ ಪೊಲೀಸ್‌ ಅಕಾಡೆಮಿಯಲ್ಲಿ ಭಾರತೀಯ ಪೊಲೀಸ್ ಸೇವೆಯ (ಐಪಿಎಸ್‌) ಪ್ರೊಬೇಷನರಿ ಅಭ್ಯರ್ಥಿಗಳೊಂದಿಗೆ ಅವರು ಸಂವಹನ ನಡೆಸಿದರು. 2024 ರ ಸಾರ್ವತ್ರಿಕ ಚುನಾವಣೆ ವೇಳೆಗೆ ಇ–ಮತದಾನದ ವ್ಯವಸ್ಥೆ ಸಾಕಾರಗೊಳ್ಳುವ ನಿರೀಕ್ಷೆ ಇದೆ ಎಂದರು.

ಅಸ್ತಿತ್ವದಲ್ಲಿರುವ ಕಾನೂನುಗಳ ತಿದ್ದುಪಡಿ ಮತ್ತು ರಾಜಕೀಯ ಒಮ್ಮತದ ಅಗತ್ಯವಿರುವುದರಿಂದ ‘ಒಂದು ದೇಶ–ಒಂದು ಚುನಾವಣೆ’ಯ ಗುರಿ ತಲುಪುವುದು ಕಷ್ಟ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

ADVERTISEMENT

ಚುನಾವಣಾ ಸುಧಾರಣೆಯ ಭಾಗವಾಗಿ ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್ ಕಾರ್ಡ್‌ ಸಂಖ್ಯೆ ಜೋಡಣೆಗೊಳಿಸುವ ಸಾಧ್ಯತೆಗಳನ್ನು ಚುನಾವಣಾ ಆಯೋಗ ಪರಿಶೀಲನೆ ಮಾಡುತ್ತಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.