ಪಟ್ನಾ: ‘ಬಿಹಾರದಲ್ಲಿ ಮತದರಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ವೇಳೆ (ಎಸ್‌ಐಆರ್) ಕಾಂಗ್ರೆಸ್‌ನ ಬೂತ್ ಮಟ್ಟದ ಏಜೆಂಟರು (ಬಿಎಲ್‌ಎ) ಮತದಾರರ ಪಟ್ಟಿ ಸಿದ್ಧಪಡಿಸುವಲ್ಲಿನ ಲೋಪಗಳಿಗೆ ಸಂಬಂಧಿಸಿದಂತೆ 89 ಲಕ್ಷ ದೂರುಗಳನ್ನು ಸಲ್ಲಿಸಿದ್ದಾರೆ. ಆದರೆ, ಕೇಂದ್ರ ಚುನಾವಣಾ ಆಯೋಗವು ಅವೆಲ್ಲವನ್ನೂ ತಿರಸ್ಕರಿಸಿದೆ’ ಎಂದು ಕಾಂಗ್ರೆಸ್ ಮುಖಂಡ ಪವನ್ ಖೇರಾ ಆರೋಪಿಸಿದ್ದಾರೆ.
‘ಚುನಾವಣಾ ಅಕ್ರಮಗಳು ಆಯೋಗದ ಉದ್ದೇಶದ ಮೇಲೆಯೇ ಅನುಮಾನ ಮೂಡಿಸುವಂತಿವೆ. ಹೀಗಾಗಿ ಮತದಾರರ ಪಟ್ಟಿಯ ಪರಿಷ್ಕರಣೆಯನ್ನು ಮತ್ತೊಮ್ಮೆ ಹೊಸದಾಗಿ ನಡೆಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ.
‘ಯಾವುದೇ ರಾಜಕೀಯ ಪಕ್ಷಗಳಿಂದ ಯಾವುದೇ ದೂರು ಬಂದಿಲ್ಲ’ ಎಂದು ಆಯೋಗ ಹೇಳುತ್ತಿದೆ. ಆದರೆ, ವಾಸ್ತವವೇ ಬೇರೆ, ನಮ್ಮ ‘ಬಿಎಲ್‌ಒ’ಗಳು ದೂರು ಕೊಡಲು ಹೋದಾಗ ಆಯೋಗ ಅದನ್ನು ತಿರಸ್ಕರಿಸಿತು. ದೂರುಗಳನ್ನು ಸಾರ್ವಜನಿಕರಿಂದ ಮಾತ್ರ ಸ್ವೀಕರಿಸಲಾಗುವುದು, ರಾಜಕೀಯ ಪಕ್ಷಗಳಿಂದ ಅಲ್ಲ ಎಂದು ಸ್ಪಷ್ಟವಾಗಿ ಹೇಳಿದೆ’ ಎಂದು ಖೇರಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.