ADVERTISEMENT

ಚೀನಾ–ಭಾರತ ಸೇನೆ ವಾಪಸ್ ಕರೆಸಿಕೊಳ್ಳುವ ಕ್ರಮದಿಂದ ಉತ್ತೇಜನಗೊಂಡಿದ್ದೇವೆ: ರಷ್ಯಾ

ಪೂರ್ವ ಲಡಾಖ್‌ ಬೆಳವಣಿಗೆಗಳ ಕುರಿತ ರಷ್ಯಾ ಅಭಿಮತ

ಪಿಟಿಐ
Published 14 ಏಪ್ರಿಲ್ 2021, 10:13 IST
Last Updated 14 ಏಪ್ರಿಲ್ 2021, 10:13 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಪೂರ್ವ ಲಡಾಖ್‌ನ ವಿವಾದಿತ ಪ್ರದೇಶಗಳಿಂದ ಭಾರತ ಮತ್ತು ಚೀನಾ ತಮ್ಮ ಸೇನೆಯನ್ನು ವಾಪಸ್ ಕರೆಸಿಕೊಳ್ಳುವ ಪ್ರಯತ್ನ ಮತ್ತು ಉಭಯ ರಾಷ್ಟ್ರಗಳ ನಡುವಿನ ರಚನಾತ್ಮಕ ಮಾತುಕತೆಯಿಂದ ಉತ್ತೇಜನಗೊಂಡಿರುವುದಾಗಿ ರಷ್ಯಾ ಹೇಳಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಷ್ಯಾ ಮಿಷನ್‌ ಉಪ ಮುಖ್ಯಸ್ಥ ರೋಮನ್ ಬಬುಶಕಿನ್‌, ‘ಬ್ರಿಕ್ಸ್, ಎಸ್‌ಸಿಒ ಮತ್ತು ಆರ್‌ಐಸಿ ಗುಂಪುಗಳಂತಹ ವೇದಿಕೆಗಳಲ್ಲಿ ತಮ್ಮ ಸಂಬಂಧಗಳನ್ನು ಮುಂದುವರಿಸಲು ರಷ್ಯಾ ಎರಡೂ ರಾಷ್ಟ್ರಗಳನ್ನು ಉತ್ತೇಜಿಸುತ್ತಿದೆ ಎಂದರು.

‘ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಾಗುತ್ತಿರುವ ಬೆಳವಣಿಗೆ ಹಾಗೂ ಗಡಿಯಿಂದ ಸೇನೆ ವಾಪಸ್ ಕರೆಸಿಕೊಳ್ಳುವ ಪ್ರಕ್ರಿಯೆಯಿಂದ ಉತ್ತೇಜನಗೊಂಡಿದ್ದೇವೆ‘ ಎಂದು ಬಬುಶಕಿನ್ ತಿಳಿದ್ದಾರೆ.

ಭಾರತ ಮತ್ತು ಚೀನಾ, ಶಾಂಘೈ ಸಹಕಾರ ಸಂಸ್ಥೆಯ(ಎಸ್‌ಸಿಒ) ಸದಸ್ಯ ರಾಷ್ಟ್ರಗಳಾಗಿವೆ. ರಷ್ಯಾ – ಭಾರತ–ಚೀನಾ (ಆರ್‌ಐಸಿ) ಗುಂಪಿನ ಸದಸ್ಯರಾಷ್ಟ್ರಗಳಾಗಿವೆ. ಅಲ್ಲದೆ ಬ್ರಿಕ್ಸ್‌(ಬ್ರೆಜಿಲ್‌–ರಷ್ಯಾ–ಇಂಡಿಯಾ–ಚೀನಾ–ದಕ್ಷಿಣ ಆಫ್ರಿಕಾ) ಸದಸ್ಯರಾಷ್ಟ್ರಗಳಾಗಿವೆ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.