ADVERTISEMENT

ಉತ್ತರಪ್ರದೇಶ: ಮಾಜಿ ಶಾಸಕನ ಬಂಧನ

ಪಿಟಿಐ
Published 3 ಜುಲೈ 2020, 11:56 IST
Last Updated 3 ಜುಲೈ 2020, 11:56 IST
   

ಅಲಹಾಬಾದ್‌: ಕಳೆದ ಮೂರು ವರ್ಷಗಳಿಂದ ತಲೆಮರೆಸಿಕೊಂಡಿದ್ದ‌ ಸಮಾಜವಾದಿ ಪಕ್ಷದ ಮಾಜಿ ಶಾಸಕಖಾಲೀದ್‌ ಅಜೀಂ ಅಲಿಯಾಸ್‌ ಅಶ್ರಫ್‌ನನ್ನು ಕೌಶಂಬಿಯಲ್ಲಿ ಶುಕ್ರವಾರ ಬಂಧಿಸಲಾಗಿದೆ.

ವಿವಿಧ ಪೊಲೀಸ್‌ ಸ್ಟೇಷನ್‌ಗಳಲ್ಲಿ ಅವರ ವಿರುದ್ಧ ಹಲವು ಅಪರಾಧ ಚಟುವಟಿಕೆಗಳ ಕಾರಣಕ್ಕೆ ಪ್ರಕರಣ ದಾಖಲಾಗಿತ್ತು. ಅಡಗುತಾಣದಲ್ಲಿದ್ದ ಅಶ್ರಫ್‌ನನ್ನು ಮುಂಜಾನೆ ಬಂಧಿಸಲಾಯಿತು ಎಂದು ಎಸ್‌ಪಿ ದಿನೇಶ್‌ ಕುಮಾರ್‌ ಸಿಂಗ್‌ ತಿಳಿಸಿದ್ದಾರೆ.

ಅಶ್ರಫ್‌ನಸುಳಿವು ಕೊಟ್ಟವರಿಗೆ ₹ 1 ಲಕ್ಷ ಬಹುಮಾನ ಘೋಷಿಸಲಾಗಿತ್ತು. ಹಲವು ಸಂಬಂಧಿಕರನ್ನು ಕರೆದು ವಿಚಾರಣೆ ನಡೆಸಲಾಯಿತು. ಅಶ್ರಫ್‌ ಮಾಜಿ ಸಂಸದ ಅತಿಕ್‌ ಅಹಮದ್‌ ಅವರ ಸಹೋದರ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.