ADVERTISEMENT

ಜೂನ್ 1ರಿಂದ 4 ಎಕ್ಸ್‌ಪ್ರೆಸ್‌ ರೈಲು ಸಂಚಾರ

​ಪ್ರಜಾವಾಣಿ ವಾರ್ತೆ
Published 27 ಮೇ 2020, 19:46 IST
Last Updated 27 ಮೇ 2020, 19:46 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕಲಬುರ್ಗಿ: ದಕ್ಷಿಣ ಮಧ್ಯ ರೈಲ್ವೆಯು ಜೂನ್‌ 1ರಿಂದ ಮುಂಬೈನಿಂದ ಬೆಂಗಳೂರು, ಗದಗ, ಹೈದರಾಬಾದ್‌‌, ಭುವನೇಶ್ವರ ನಗರಗಳಿಗೆ ರೈಲು ಸೇವೆ ಪುನರಾರಂಭಿಸಲಿದೆ.ಐಆರ್‌ಸಿಟಿಸಿ ಟಿಕೆಟ್‌ ಬುಕ್ಕಿಂಗ್‌ ಆರಂಭಿಸಿದೆ.

ಮುಂಬೈ ಸಿಎಸ್‌ಟಿನಿಂದ ಭುವನೇಶ್ವರಕ್ಕೆ ತೆರಳುವ ಕೊನಾರ್ಕ್ ಎಕ್ಸ್‌ಪ್ರೆಸ್‌, ಮುಂಬೈ–ಗದಗ ಎಕ್ಸ್‌ಪ್ರೆಸ್, ಮುಂಬೈ–ಬೆಂಗಳೂರು ಮಧ್ಯೆ ಸಂಚರಿಸುವ ಉದ್ಯಾನ್ ಎಕ್ಸ್‌ಪ್ರೆಸ್‌ ಹಾಗೂ ಮುಂಬೈ–ಹೈದರಾಬಾದ್ ಮಧ್ಯೆ ನಿತ್ಯ ಸಂಚರಿಸುವ‌ ಹುಸೇನ್‌ ಸಾಗರ‌ ಎಕ್ಸ್‌ಪ್ರೆಸ್‌ ರೈಲುಗಳ ಸೇವೆ ಆರಂಭಗೊಳ್ಳಲಿದೆ.

ಕಲಬುರ್ಗಿ ಮಾರ್ಗವಾಗಿ ತೆರಳುವ ಮೂರು ರೈಲುಗಳುಕಲಬುರ್ಗಿ ಹಾಗೂ ವಾಡಿಯಲ್ಲಿ ನಿಲುಗಡೆ ಆಗಲಿವೆ. ಪ್ರಯಾಣಿಕರ ಆರೋಗ್ಯ ತಪಾಸಣೆಗೆ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡುವಂತೆದಕ್ಷಿಣ ಮಧ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಅಜಯ್ ಕುಮಾರ್ ಅವರು ಕಲಬುರ್ಗಿ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.