ADVERTISEMENT

ಸುಳ್ಳುಸುದ್ದಿ ಪರಿಶೀಲನೆಗೆ ಫೇಸ್‌ಬುಕ್ ತಂತ್ರ

ಪಿಟಿಐ
Published 11 ಫೆಬ್ರುವರಿ 2019, 12:15 IST
Last Updated 11 ಫೆಬ್ರುವರಿ 2019, 12:15 IST
   

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸುಳ್ಳುಸುದ್ದಿಗಳು ಹರಡದಂತೆ ತಡೆಯಲು ಹಾಗೂ ಅಂತಹವುಗಳ ಪರಿಶೀಲನೆಗೆ ಫೇಸ್‌ಬುಕ್ ನಡೆಸಲು ಬಾಹ್ಯ ಸಂಸ್ಥೆಗಳ ನೆರವು ಪಡೆಯಲು‍ಮುಂದಾಗಿದೆ.

ಫೇಸ್‌ಬುಕ್ ಜೊತೆ ಇಂಡಿಯಾ ಟುಡೇ ಗ್ರೂಪ್, ವಿಶ್ವಾಸ್ ಡಾಟ್ ನ್ಯೂಸ್, ನ್ಯೂಸ್‌ಮೊಬೈಲ್, ಫ್ಯಾಕ್ಟ್ ಕ್ರೆಸೆಂಡೊ ಸಂಸ್ಥೆಗಳು ಕೈಜೋಡಿಸಿವೆ. ಇವು ಸ್ವತಂತ್ರವಾಗಿದ್ದು, ಸತ್ಯಾಸತ್ಯತೆ ಪರಿಶೀಲನೆಯಲ್ಲಿಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಮಾಣೀಕೃತ ಸಂಸ್ಥೆಗಳಾಗಿವೆ.

ಸೋಮವಾರದಿಂದಲೇ ಇವು ಕಾರ್ಯಾರಂಭ ಮಾಡಿದ್ದು, ಫೇಸ್‌ಬುಕ್‌ನಲ್ಲಿ ಪ್ರಕಟವಾಗುವ ಸುದ್ದಿಗಳನ್ನು ಪರಿಶೀಲನೆ ನಡೆಸಿ, ಅವುಗಳ ಸತ್ಯಾಸತ್ಯತೆಯ ಮಟ್ಟವನ್ನು ನಿಗದಿಪಡಿಸಲಿವೆ’ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ಇಂಗ್ಲಿಷ್, ಹಿಂದಿ, ಮರಾಠಿ, ಬಂಗಾಳಿ, ತೆಲುಗು, ಮಲಯಾಳಂ ಭಾಷೆಗಳಲ್ಲಿ ಪ್ರಕಟವಾಗುವ ಮಾಹಿತಿಗಳೂ ಪರಿಶೀಲನೆಗೆ ಒಳಪಡಲಿವೆ.

ಫೊಟೊ ಮತ್ತು ವಿಡಿಯೊಗಳ ಸತ್ಯಾಸತ್ಯತೆ ಪರಿಶೀಲಿಸುವ ಕೆಲವು ಟೂಲ್‌ಗಳನ್ನು ಫೇಸ್‌ಬುಕ್ ಅಳವಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.