ADVERTISEMENT

ರೈತರಿಗೆ ತಮಗೇನು ಬೇಕೆಂಬುದು ತಿಳಿದಿಲ್ಲ: ಹೇಮಾ ಮಾಲಿನಿ

ಏಜೆನ್ಸೀಸ್
Published 13 ಜನವರಿ 2021, 13:34 IST
Last Updated 13 ಜನವರಿ 2021, 13:34 IST
ಬಿಜೆಪಿ ಸಂಸದೆ ಹೇಮಾ ಮಾಲಿನಿ
ಬಿಜೆಪಿ ಸಂಸದೆ ಹೇಮಾ ಮಾಲಿನಿ   

ನವದೆಹಲಿ: ದೆಹಲಿಯ ಗಡಿ ಪ್ರದೇಶಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ತಮಗೆ ಏನು ಬೆೇಕೆಂಬುದು ತಿಳಿದಿಲ್ಲ. ಯಾರದ್ದೋ ಮಾತು ಕೇಳಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದೆ ಹಾಗೂ ಬಾಲಿವುಡ್ ಹಿರಿಯ ನಟಿ ಹೇಮಾ ಮಾಲಿನಿ ಆರೋಪಿಸಿದ್ದಾರೆ.

ಕೃಷಿ ಕಾಯ್ದೆಗಳನ್ನು ಸುಪ್ರೀಂ ಕೋರ್ಟ್ ತಡೆ ಹಿಡಿದಿರುವುದು ಒಳ್ಳೆಯದು. ಇದು ಪರಿಸ್ಥಿತಿಯನ್ನು ಶಾಂತಗೊಳಿಸಲಿದೆ. ಹಲವು ಸುತ್ತಿನ ಮಾತುಕತೆಯ ಬಳಿಕವೂ ರೈತರು ಒಮ್ಮತಕ್ಕೆ ಬರಲು ಸಿದ್ಧರಿಲ್ಲ. ಅವರಿಗೆ ಏನು ಬೇಕು ಮತ್ತುಕೃಷಿ ಕಾನೂನುಗಳಲ್ಲಿ ಸಮಸ್ಯೆ ಏನಿದೆ ಎಂಬುದು ಸಹ ತಿಳಿದಿಲ್ಲ. ಇದರರ್ಥ ಯಾರೋ ಹೇಳಿದ್ದರಿಂದ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಹೇಮಾ ಮಾಲಿನಿ ಆರೋಪಿಸಿದರು.

ಇದೇ ವೇಳೆ ಪಂಜಾಬ್‌ನಲ್ಲಿ ಮೊಬೈಲ್ ಟವರ್‌ಗಳನ್ನು ಧ್ವಂಸಗೊಳಿಸಿರುವ ರೈತರ ವಿರುದ್ಧ ಹೇಮಾ ಮಾಲಿನಿ ಆಕ್ರೋಶ ತೋಡಿಕೊಂಡರು.

ADVERTISEMENT

ಪಂಜಾಬ್‌ ಸಾಕಷ್ಟು ನಷ್ಟ ಅನುಭವಿಸಿದೆ. ರೈತರು ಮೊಬೈಲ್ ಟವರ್‌ಗಳನ್ನು ಧ್ವಂಸಗೊಳಿಸಿರುವುದು ಉತ್ತಮ ಅಂಶವಲ್ಲ. ಸರ್ಕಾರವು ಪದೇ ಪದೇ ಮಾತುಕತೆಗೆ ಆಹ್ವಾನಿಸಿದೆ. ಆದರೆ ಅವರಿಗೆ ಯಾವುದೇ ಅಜೆಂಡಾ ಕೂಡಾ ಇಲ್ಲ ಎಂದು ಹೇಳಿದರು.

ಸರದಿ ಬಂದಾಗ ಕೋವಿಡ್-19 ಲಸಿಕೆ ಪಡೆಯಲಿದ್ದೇನೆ...
ಏತನ್ಮಧ್ಯೆ ಪ್ರತಿಕ್ರಿಯಿಸಿರುವ ಹೇಮಾ ಮಾಲಿನಿ, ತನ್ನ ಸರದಿ ಬಂದಾಗ ಖಂಡಿತವಾಗಿಯೂ ಕೋವಿಡ್-19 ಲಸಿಕೆ ಪಡೆಯುವುದಾಗಿ ತಿಳಿಸಿದ್ದಾರೆ.

ವಿರೋಧ ಪಕ್ಷಗಳು ಆರೋಪಗಳನ್ನು ಮಾಡುತ್ತಿವೆ. ಸರ್ಕಾರಗಳು ಏನೇ ಹೇಳಿದರೂ ಅದಕ್ಕೆ ವಿರುದ್ಧವಾಗಿ ಹೇಳುವುದು ಅವರ ಕೆಲಸ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.