ADVERTISEMENT

ಉತ್ತರ ಪ್ರದೇಶ | ಮಹಾ ಕುಂಭಮೇಳದಲ್ಲಿ ಭಾಗವಹಿಸದ ಜನರ ಮನೆ ಬಾಗಿಲಿಗೆ 'ಸಂಗಮ ಜಲ'

ಪಿಟಿಐ
Published 28 ಫೆಬ್ರುವರಿ 2025, 2:56 IST
Last Updated 28 ಫೆಬ್ರುವರಿ 2025, 2:56 IST
<div class="paragraphs"><p>ಮಹಾ ಕುಂಭಮೇಳ</p></div>

ಮಹಾ ಕುಂಭಮೇಳ

   

ಪಿಟಿಐ

ಪ್ರಯಾಗ್‌ರಾಜ್: ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಲು ಸಾಧ್ಯವಾಗದವರಿಗೆ ಅವರ ಮನೆ ಬಾಗಿಲಿಗೆ ಸಂಗಮದ ಜಲ ವಿತರಿಸಲು ಉತ್ತರ ಪ್ರದೇಶದ ಸರ್ಕಾರ ಮುಂದಾಗಿದೆ.

ADVERTISEMENT

ರಾಜ್ಯದ 75 ಜಿಲ್ಲೆಗಳ ಜನರಿಗೆ ಈ ಸಂಗಮದ ನೀರನ್ನು ವಿತರಿಸುವಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತುರ್ತು ಸೇವೆ ಮತ್ತು ಅಗ್ನಿಶಾಮಕ ಇಲಾಖೆಗೆ ಸೂಚಿಸಿದ್ದಾರೆ.

ಸಂಗಮದಲ್ಲಿ ಸ್ನಾನ ಮಾಡಲು ಆಗದ ಜನರ ಮನೆ ಬಾಗಿಲಿಗೆ ಸಂಗಮದ ಜಲವನ್ನು ವಿತರಿಸಲಾಗವುದು ಎಂದು ಈ ಹಿಂದೆ ಆದಿತ್ಯನಾಥ್ ಜನರಿಗೆ ಭರವಸೆ ನೀಡಿದ್ದರು.

ಈ ಪ್ರಕ್ರಿಯೆಯು ಇಂದಿನಿಂದ (ಶುಕ್ರವಾರ) ಪ್ರಾರಂಭವಾಗಲಿದ್ದು, ಜನರು ತಮ್ಮ ಮನೆಗಳಲ್ಲಿಯೇ ಗಂಗಾ ಜಲ ಸ್ವೀಕರಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.

12 ವರ್ಷಗಳ ನಂತರ ನಡೆದ ಮಹಾ ಕುಂಭಮೇಳವು ಜನವರಿ 13 ರಿಂದ ಫೆಬ್ರುವರಿ 26 ರವರೆಗೆ ನಡೆದಿದೆ. ಪ್ರಯಾಗ್‌ರಾಜ್‌ನಲ್ಲಿ ನಡೆದ ಕುಂಭಮೇಳಕ್ಕೆ ದೇಶ ಮತ್ತು ವಿದೇಶಗಳಿಂದ ಸುಮಾರು 66 ಕೋಟಿಗೂ ಹೆಚ್ಚು ಜನರು ಆಗಮಿಸಿದ್ದರು ಎಂದು ಸರ್ಕಾರ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.