ADVERTISEMENT

ಡೆಲ್ಟಾಗಿಂತಲೂ ಹೆಚ್ಚು ರೂಪಾಂತರಗಳನ್ನು ಹೊಂದಿರುವ ಓಮಿಕ್ರಾನ್: ಸಂಶೋಧನೆ

ಏಜೆನ್ಸೀಸ್
Published 29 ನವೆಂಬರ್ 2021, 4:41 IST
Last Updated 29 ನವೆಂಬರ್ 2021, 4:41 IST
ಎಎಫ್‌ಪಿ ಚಿತ್ರ
ಎಎಫ್‌ಪಿ ಚಿತ್ರ   

ರೋಮ್: ವಿಶ್ವದಾದ್ಯಂತ ಕಳವಳಕ್ಕೆ ಕಾರಣವಾಗಿರುವ ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾದ ಕೊರೊನಾ ರೂಪಾಂತರ ತಳಿ ಓಮಿಕ್ರಾನ್, ಡೆಲ್ಟಾಗಿಂತಲೂ ಹೆಚ್ಚು ರೂಪಾಂತರಗಳನ್ನು ಹೊಂದಿದೆ ಎಂದು ಇಟಲಿಯ ರೋಮ್‌ನ ಪ್ರತಿಷ್ಠಿತ ಬಂಬಿನೊ ಗೆಸು ಆಸ್ಪತ್ರೆ ಬಿಡುಗಡೆ ಮಾಡಿರುವ ವೈರಸ್‌ನ ಮೊದಲ ಚಿತ್ರದಲ್ಲಿ ತಿಳಿದುಬಂದಿದೆ.

ನಕ್ಷೆಯಂತೆ ಕಾಣುವ ಮೂರು ಆಯಾಮದ 'ಚಿತ್ರ' ದಲ್ಲಿ, ಒಮಿಕ್ರಾನ್ ರೂಪಾಂತರವು ಡೆಲ್ಟಾ ರೂಪಾಂತರಕ್ಕಿಂತ ಹೆಚ್ಚಿನ ರೂಪಾಂತರಗಳನ್ನು ಹೊಂದಿರುವುದನ್ನು ನಾವು ಸ್ಪಷ್ಟವಾಗಿ ನೋಡಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಮಾನವ ಜೀವಕೋಶಗಳೊಂದಿಗೆ ಸಂವಹನ ನಡೆಸುವ ಪ್ರೋಟೀನ್‌ ಒಂದೇ ಪ್ರದೇಶದಲ್ಲಿ ಕೇಂದ್ರೀಕೃತವಾಗಿದೆ’ಎಂದುಸಂಶೋಧಕರ ತಂಡ ಭಾನುವಾರ ಹೇಳಿಕೆಯಲ್ಲಿ ತಿಳಿಸಿದೆ.

‘ಇದರರ್ಥ ಈ ರೂಪಾಂತರವು ಹೆಚ್ಚು ಅಪಾಯಕಾರಿ ಎಂದರ್ಥವಲ್ಲ. ವೈರಸ್ ಮತ್ತೊಂದು ರೂಪಾಂತರವನ್ನು ಸೃಷ್ಟಿಸುವ ಮೂಲಕ ಮಾನವರ ದೇಹಕ್ಕೆ ಹೊಂದಿಕೊಳ್ಳುತ್ತದೆ’ಎಂದು ಅವರು ಹೇಳಿದ್ದಾರೆ.

ADVERTISEMENT

ಸಂಶೋಧಕರ ತಂಡವು ‘ಪ್ರೋಟಿನ್‌ನ ಮೂರು ಆಯಾಮದ ವ್ಯವಸ್ಥೆ’ಮೇಲೆ ಗಮನ ಕೇಂದ್ರೀಕರಿಸಿದೆ ಎಂದು ಮಿಲನ್ ಸ್ಟೇಟ್ ಯೂನಿವರ್ಸಿಟಿ ಮತ್ತು ಬಂಬಿನೊ ಗೆಸು ಆಸ್ಪತ್ರೆಯ ಕ್ಲಿನಿಕಲ್ ಮೈಕ್ರಿಬಯಾಲಜಿಯ ಪರೊಫೆಸರ್ ಕ್ಲಾಡಿಯಾ ಆಲ್ಟರಿ ಹೇಳಿದ್ದಾರೆ.

ಮುಖ್ಯವಾಗಿ ಬೋಟ್‌ಸ್ವಾನಾ, ದಕ್ಷಿಣ ಆಫ್ರಿಕಾ ಮತ್ತು ಹಾಂಗ್‌ಕಾಂಗ್‌ನಲ್ಲಿ ಕಂಡು ಬಂದ ವೈರಸ್‌ ಕುರಿತಂತೆ ವೈಜ್ಞಾನಿಕ ಸಮುದಾಯಕ್ಕೆ ಲಭ್ಯವಾದ ಈ ಹೊಸ ರೂಪಾಂತರದ ಸೀಕ್ವೆನ್ಸ್‌ಗಳ ಅಧ್ಯಯನದಿಂದ ಈ ಚಿತ್ರವನ್ನು ನಿರ್ಮಿಸಲಾಗಿದೆ.

‘ಎಲ್ಲಾ ರೂಪಾಂತರಗಳನ್ನು ನಕ್ಷೆಯನ್ನು ಪ್ರತಿನಿಧಿಸುವ ಈ ಚಿತ್ರವು ಓಮಿಕ್ರಾನ್‌ನ ರೂಪಾಂತರಗಳನ್ನು ವಿವರಿಸುತ್ತದೆ. ಆದರೆ, ಅದರ ಪಾತ್ರವನ್ನು ವ್ಯಾಖ್ಯಾನಿಸುವುದಿಲ್ಲ’ಎಂದು ಅವರು ಹೇಳಿದ್ದಾರೆ.

‘ಈ ರೂಪಾಂತರಗಳ ಸಂಯೋಜನೆಯು ಪ್ರಸರಣದ ಮೇಲೆ ಅಥವಾ ಲಸಿಕೆಗಳ ಪರಿಣಾಮಕಾರಿತ್ವದ ಮೇಲೆ ಪ್ರಭಾವ ಬೀರಬಹುದೇ ಎಂದು ಪ್ರಯೋಗಗಳ ಮೂಲಕ ವ್ಯಾಖ್ಯಾನಿಸುವುದು ಈಗ ಮುಖ್ಯವಾಗಿದೆ’ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.