ADVERTISEMENT

ವರುಣನ ಆರ್ಭಟಕ್ಕೆ 174 ಜನರ ಸಾವು, 4 ಸಾವಿರ ಮಂದಿ ರಕ್ಷಣೆ: ಕೇರಳ ಸಿಎಂ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2018, 9:36 IST
Last Updated 17 ಆಗಸ್ಟ್ 2018, 9:36 IST
   

ತಿರುವನಂತಪುರ: ವರುಣನ ಆರ್ಭಟಕ್ಕೆ ಇಲ್ಲಿಯವರೆಗೂ ಕೇರಳದಲ್ಲಿ 174ಜನ ಮೃತಪಟ್ಟಿದ್ದು, 4 ಸಾವಿರಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಲಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಶುಕ್ರವಾರ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರುತ್ರಿಶೂರ್, ಪಥನಂತಿಟ್ಟ, ಎರ್ನಾಕುಲಂ, ಅಲಪುಳದಲ್ಲಿ ಪ್ರವಾಹ ಮುಂದುವರಿದಿದ್ದು ಸಂಕಷ್ಟದಲ್ಲಿ ಸಿಲುಕಿರುವ ಜನರ ರಕ್ಷಣೆಗೆ ಮಳೆ ಅಡ್ಡಿಪಡಿಸುತ್ತಿದೆ. ಆದಾಗ್ಯೂ ಸೇನಾ ಪಡೆ ಯೋಧರು ಮತ್ತು 40ಕ್ಕೂ ಹೆಚ್ಚು ಎನ್‌ಡಿಆರ್‌ಎಫ್‌ ತಂಡಗಳು ಭರದಿಂದ ರಕ್ಷಣಾ ಕಾರ್ಯ ನಡೆಸುತ್ತಿವೆ ಎಂದು ಅವರು ಮಾಹಿತಿ ನೀಡಿದರು.

ಮುಳುಗಡೆ ಪ್ರದೇಶಗಳಲ್ಲಿ ಇರುವ ಜನರನ್ನು ಹೆಲಿಕಾಪ್ಟರ್‌ ಮತ್ತು ದೋಣಿಗಳ ಮೂಲಕ ರಕ್ಷಣೆ ಮಾಡಲಾಗುತ್ತಿದೆ. ರಾಜ್ಯದಾದ್ಯಂತ 1568 ನಿರಾಶ್ರಿತರ ಶಿಬಿರಗಳನ್ನು ತೆರೆದಿದ್ದು ಒಟ್ಟು 2,23,000 ಜನರು ಆಶ್ರಯ ಪಡೆದಿದ್ದಾರೆ. ರಾಜ್ಯ ಸರ್ಕಾರದ2 ಹೆಲಿಕಾಪ್ಟರ್‌ಗಳು ಮತ್ತು ಭಾರತೀಯ ವಾಯುಪಡೆಗೆ ಸೇರಿದ 11 ಹೆಲಿಕಾಪ್ಟರ್‌ಗಳ ಮೂಲಕ ರಕ್ಷಣ ಕಾರ್ಯ ನಡೆಸಲಾಗುತ್ತಿದೆ. 150 ಹೆಚ್ಚು ಹೊಸ ದೋಣಿಗಳನ್ನು ತರಿಸಲಾಗಿದ್ದು ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ ಎಂದು ಪಿಣರಾಯಿ ವಿಜಯನ್‌ ತಿಳಿಸಿದರು.

ADVERTISEMENT

ತ್ರಿಶೂರ್, ಪಥನಂತಿಟ್ಟ, ಎರ್ನಾಕುಲಂ, ಅಲಪುಳ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ದೋಣಿಗಳನ್ನು ಬಳಸಿಕೊಂಡು ಸಂತ್ರಸ್ಥರನ್ನು ರಕ್ಷಣೆ ಮಾಡಲಾಗುತ್ತಿದೆ. ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಹೆಲಿಕಾಫ್ಟರ್‌ ಕಾರ್ಯಾಚರಣೆಗೂ ಅಡ್ಡಿಯಾಗುತ್ತಿದೆ. ನೌಕಪಡೆ ರಕ್ಷಣಾ ತಂಡಗಳು ಸೇರಿದಂತೆ 40ಕ್ಕೂ ಎನ್‌ಡಿಎಫ್‌ ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ ಎಂದು ಅವರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.