ಮುಂಬೈ: ನಿರ್ಲಕ್ಷ್ಯತನದಿಂದ ಕಾರು ಚಾಲನೆ ಮಾಡಿ ಖಾಸಗಿ ಆಸ್ತಿಗೆ ದಕ್ಕೆ ಮಾಡಿದ್ದರ ಆರೋಪದ ಮೇಲೆಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಅವರನ್ನು ಮುಂಬೈ ಪೊಲೀಸರು ಭಾನುವಾರ ಸಂಜೆ ಬಂಧಿಸಿದ್ದರು.
ನಂತರ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ಟ್ವೀಟ್ ಮಾಡಿದೆ.
ತಾವು ವಾಸಿಸುವ ಮುಂಬೈನ ಬಾಂದ್ರಾದ ಮನೆಯೊಂದರ ಗೇಟ್‌ಗೆ ಕಾರ್ ಗುದ್ದಿಸಿ, ನಷ್ಟ ಮಾಡಿದ್ದ ಆರೋಪವನ್ನು ಕಾಂಬ್ಳಿ ಅವರ ಮೇಲೆ ಹೊರಿಸಲಾಗಿತ್ತು. ಅವರನ್ನು ಸದ್ಯಕ್ಕೆ ಜಾಮೀನಿನ ಮಲೆ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಸತಿ ಸಮುಚ್ಚಯದವರು ನೀಡಿದ ದೂರಿನ ಆಧಾರದಲ್ಲಿ ಕಾಂಬ್ಳಿ ಅವರ ಮೇಲೆ ಐಪಿಸಿ ಕಲಂ 279, 336 ಹಾಗೂ 427 ಅಡಿ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿನೋದ್ ಕಾಂಬ್ಳಿ ಅವರು ಕ್ರಿಕೆಟ್ ಟೀಂ ಇಂಡಿಯಾದಲ್ಲಿ 1991 ರಿಂದ 2000 ರವರೆಗೆ ಆಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.