ADVERTISEMENT

ಕೇಂದ್ರ ಲೋಕ ಸೇವಾ ಆಯೋಗದ ಅಧ್ಯಕ್ಷೆಯಾಗಿ ಪ್ರೀತಿ ಸೂದನ್ ನೇಮಕ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಜುಲೈ 2024, 5:21 IST
Last Updated 31 ಜುಲೈ 2024, 5:21 IST
<div class="paragraphs"><p>ಪ್ರೀತಿ ಸೂದನ್</p></div>

ಪ್ರೀತಿ ಸೂದನ್

   

ಚಿತ್ರಕೃಪೆ: ಎಕ್ಸ್‌ (ಟ್ವಿಟರ್‌)

ನವದೆಹಲಿ: ಕೇಂದ್ರದ ಮಾಜಿ ಆರೋಗ್ಯ ಕಾರ್ಯದರ್ಶಿ ಪ್ರೀತಿ ಸೂದನ್ ಅವರು ಕೇಂದ್ರ ಲೋಕ ಸೇವಾ ಆಯೋಗದ (ಯುಪಿಎಸ್‌ಸಿ) ಅಧ್ಯಕ್ಷೆಯಾಗಿ ನೇಮಕಗೊಂಡಿದ್ದು, ಆಗಸ್ಟ್‌ 1ರಂದು (ಗುರುವಾರ) ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

1983ನೇ ಬ್ಯಾಚ್‌ನ ಐಎಎಸ್ ಅಧಿಕಾರಿ, 65 ವರ್ಷದ ಪ್ರೀತಿ ಸೂದನ್ ಅವರು 2025ರ ಏಪ್ರಿಲ್ ವರೆಗೆ ಅಧಿಕಾರಾವಧಿ ಹೊಂದಿರುತ್ತಾರೆ ಎಂದು ವರದಿಯಾಗಿದೆ.

ಈಚೆಗೆ ಯುಪಿಎಸ್‌ಸಿ ಅಧ್ಯಕ್ಷರಾಗಿದ್ದ ಮನೋಜ್‌ ಸೋನಿ ಅವರು ತಮ್ಮ ಅಧಿಕಾರಾವಧಿ ಮುಗಿಯುವ 5 ವರ್ಷಗಳ ಮುನ್ನ ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ರಾಜೀನಾಮೆ ನೀಡಿದ್ದರು.

ಐಎಎಸ್‌ ಪ್ರೊಬೇಷನರಿ ಅಧಿಕಾರಿ ಪೂಜಾ ಖೇಡ್ಕರ್‌ ಅವರ ನೇಮಕಾತಿ ಕುರಿತ ವಿವಾದ ಮತ್ತು ಆರೋಪಗಳಿಗೂ ಮನೋಜ್‌ ಅವರ ರಾಜೀನಾಮೆಗೂ ಸಂಬಂಧ ಇಲ್ಲ ಎಂದು ಅವರು ಹೇಳಿದ್ದರು. ‘ಯುಪಿಎಸ್‌ಸಿ ಅಧ್ಯಕ್ಷರು 15 ದಿನಗಳ ಹಿಂದೆಯೇ ವೈಯಕ್ತಿಕ ಕಾರಣ ಉಲ್ಲೇಖಿಸಿ ರಾಜೀನಾಮೆ ನೀಡಿದ್ದಾರೆ. ಅದಿನ್ನೂ ಅಂಗೀಕಾರ ಆಗಿಲ್ಲ’ ಎಂದು ಮೂಲಗಳು ಸ್ಪಷ್ಟಪಡಿಸಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.