ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಎಐ ಚಿತ್ರ
ಕೃಪೆ: X / @EmmanuelMacron
ನವದೆಹಲಿ: ಉಭಯ ರಾಷ್ಟ್ರಗಳ ನಡುವಣ ಸ್ನೇಹ ಸಂಬಂಧವನ್ನು ಸಾರುವ ಸಲುವಾಗಿ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗಿನ ಎಐ ಚಿತ್ರವನ್ನು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಹಂಚಿಕೊಂಡಿದ್ದಾರೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆಯುತ್ತಿರುವ AI Summitನಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಅವರು, ಮೋದಿ ಜೊತೆಗಿನ ಚಿತ್ರದೊಂದಿಗೆ, 'ಸ್ನೇಹಿತರು ಒಂದಾದಾಗ, ನಾವೀನ್ಯತೆಯೂ ಜೊತೆಗೂಡುತ್ತದೆ. ಎಐ ಇಂಪ್ಯಾಕ್ಟ್ ಶೃಂಗಸಭೆಗೆ ಸಿದ್ಧ' ಎಂದು ಎಂದೂ ಬರೆದುಕೊಂಡಿದ್ದಾರೆ.
ಮೋದಿ ಅವರೊಂದಿಗೆ ಮುಂಬೈನಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಿದ ನಂತರ, ಪತ್ನಿ ಬ್ರಿಗಿಟ್ ಮ್ಯಾಕ್ರನ್ ಅವರೊಂದಿಗೆ ದೆಹಲಿಯತ್ತ ತೆರಳಿದರು.
ಎರಡೂ ರಾಷ್ಟ್ರಗಳ ನಡುವಣ ಕಾರ್ಯತಂತ್ರದ ಪಾಲುದಾರಿಕೆ, ರಕ್ಷಣಾ ಸಹಕಾರ, ವ್ಯಾಪಾರ, ಇಂಧನ, ಆಧುನಿಕ ತಂತ್ರಜ್ಞಾನ, ಕೈಗಾರಿಕಾ ವಲಯದಲ್ಲಿ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಪ್ರಯತ್ನಗಳ ಭಾಗವಾಗಿ ಉಭಯ ನಾಯಕರು ಮಂಗಳವಾರ ಸಭೆ ನಡೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.