ಅಮರಾವತಿ: ರಾಜ್ಯಾದ್ಯಂತ 15,000 ಗಣೇಶ ಪ್ರತಿಷ್ಠಾಪನ ಮಂಡಲಿಗಳಿಗೆ ಉಚಿತ ವಿದ್ಯುತ್ ಒದಗಿಸಲು ರಾಜ್ಯ ಸರ್ಕಾರ ₹25 ಕೋಟಿಗಳನ್ನು ಹಂಚಿಕೆ ಮಾಡಿದೆ ಎಂದು ಆಂಧ್ರಪ್ರದೇಶದ ಇಂಧನ ಸಚಿವ ಜಿ. ರವಿ ಕುಮಾರ್ ಹೇಳಿದ್ದಾರೆ.
ರಾಜ್ಯದಲ್ಲಿ ನಡೆಯುವ ಗಣೇಶ ಉತ್ಸವ ಹಾಗೂ ಇತರ ಧಾರ್ಮಿಕ ಕಾರ್ಯಕ್ರಮಗಳು ಸುಗಮವಾಗಿ ನಡೆಯಲಿ ಎಂಬ ಉದ್ದೇಶದಿಂದ ಎನ್‌ಡಿಎ ಸಮ್ಮಿಶ್ರ ಸರ್ಕಾರವು ₹25 ಕೋಟಿ ರೂ.ಗಳನ್ನು ಹಂಚಿಕೆ ಮಾಡಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ರವಿ ಕುಮಾರ್ ಹೇಳಿದರು.
ಹಿಂದಿನ ಸರ್ಕಾರವು ಆಂಧ್ರಪ್ರದೇಶವನ್ನು ಭಾರೀ ಸಾಲಕ್ಕೆ ತಳ್ಳಿದೆ. ಅಪೂರ್ಣ ಯೋಜನೆಗಳಿಂದ ನಾಗರಿಕರನ್ನು ದಾರಿ ತಪ್ಪಿಸಿದೆ ಎಂದು ಅವರು ಆರೋಪಿಸಿದರು. ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರ ನೇತೃತ್ವದ ವೈಎಸ್‌ಆರ್‌ಸಿಪಿ ಶೂನ್ಯ ಅಭಿವೃದ್ದಿಯನ್ನು ಸಾಧಿಸಿದೆ ಕುಮಾರ್ ಟೀಕಿಸಿದರು.
ನಮ್ಮ ಎನ್‌ಡಿಎ ಸರ್ಕಾರವು ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಚುನಾವಣಾ ವೇಳೆ ನೀಡಿದ್ದ ಭರವಸೆಗಳನ್ನು ಈಡೇರಿಸಿದೆ. ಕಲ್ಯಾಣ ರಾಜ್ಯದ ಕಲ್ಪನೆಯಡಿ ಹಲವು ಜನಮುಖಿ ಯೋಜನೆಗಳನ್ನು ರೂಪಿಸಲಾಗಿದೆ. ರೆಡ್ಡಿಯವರ ಸರ್ಕಾರದ ಸುಳ್ಳು ಭರವಸೆ ಹಾಗೂ ಅಪ್ರಯೋಜಕತೆಗಿಂತ ನಮ್ಮ ಸರ್ಕಾರ ಭಿನ್ನವಾಗಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.