ADVERTISEMENT

ಸಂಭಲ್: ರಸ್ತೆ, ತಾರಸಿಗಳ ಮೇಲೆ ಗುಂಪು ಸೇರುವುದು ನಿಷಿದ್ಧ

ಪಿಟಿಐ
Published 27 ಮಾರ್ಚ್ 2025, 10:59 IST
Last Updated 27 ಮಾರ್ಚ್ 2025, 10:59 IST
<div class="paragraphs"><p>ನಮಾಜ್&nbsp; (ಪ್ರಾತಿನಿಧಿಕ ಚಿತ್ರ)</p></div>

ನಮಾಜ್  (ಪ್ರಾತಿನಿಧಿಕ ಚಿತ್ರ)

   

ಸಂಭಲ್‌ (ಉತ್ತರ ಪ್ರದೇಶ): ‘ರಂಜಾನ್‌ ಸಂದರ್ಭದಲ್ಲಿ ರಸ್ತೆ, ಕಟ್ಟಡಗಳ ತಾರಸಿ ಮೇಲೆ ನಮಾಜ್‌ ಮಾಡುವುದನ್ನು ನಿಷೇಧಿಸಲಾಗಿದೆ’ ಎಂದು ಸಂಭಲ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಶ ಚಂದ್ರ ಗುರುವಾರ ತಿಳಿಸಿದ್ದಾರೆ. ಅವಘಡ ನಡೆಯದಂತೆ ತಡೆಯುವುದು ಇದರ ಉದ್ದೇಶ ಎಂದು ಹೇಳಿದ್ದಾರೆ.

‘ಅಲ್ವಿದಾ’ (ರಂಜಾನ್‌ ಮಾಸದ ಕೊನೆಯ ಶುಕ್ರವಾರ ನಡೆಯುವ ಪ್ರಾರ್ಥನೆ) ಸಿದ್ಧತೆ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಕಾನೂನು ಸುವ್ಯವಸ್ಥೆ ರಕ್ಷಣೆಗಾಗಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ’ ಎಂದರು.

ADVERTISEMENT

‘ತಾರಸಿಯಲ್ಲಿ ನಮಾಜ್‌ ಮಾಡಬಹುದೇ ಎಂದು ಶಾಂತಿ ಸಮಿತಿ ಸಭೆಯಲ್ಲಿ ಕೇಳಿಬಂದ ಪ್ರಶ್ನೆಗೆ, ಹೆಚ್ಚಿನ ಜನ ಸೇರಿದಲ್ಲಿ ಅವಘಡ ಸಂಭವಿಸಬಹುದು ಎಂದು ಮನವರಿಕೆ ಮಾಡಲಾಗಿದೆ’ ಎಂದು ತಿಳಿಸಿದರು.

ಸಾಂಪ್ರದಾಯಿಕವಾಗಿ ಮಸೀದಿಗಳು ಮತ್ತು ಈದ್ಗಾ ಆವರಣದಲ್ಲಿ ನಮಾಜ್‌ ಮಾಡಲು ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.