ADVERTISEMENT

ದೆಹಲಿಯಲ್ಲಿ ಜಿ 20 ಶೃಂಗಸಭೆ: ಸಾವಿರಕ್ಕೂ ಹೆಚ್ಚು ಭಿಕ್ಷುಕರ ಸ್ಥಳಾಂತರ

ಪಿಟಿಐ
Published 23 ಡಿಸೆಂಬರ್ 2022, 11:09 IST
Last Updated 23 ಡಿಸೆಂಬರ್ 2022, 11:09 IST
ನವದೆಹಲಿಯ ಕಾಶ್ಮೀರಿ ಗೇಟ್ ಸಮೀಪದ ಮೇಲ್ಸೇತುವೆ ಕೆಳಗಿರುವ ನಿರಾಶ್ರಿತರು –ಪಿಟಿಐ ಸಂಗ್ರಹ ಚಿತ್ರ 
ನವದೆಹಲಿಯ ಕಾಶ್ಮೀರಿ ಗೇಟ್ ಸಮೀಪದ ಮೇಲ್ಸೇತುವೆ ಕೆಳಗಿರುವ ನಿರಾಶ್ರಿತರು –ಪಿಟಿಐ ಸಂಗ್ರಹ ಚಿತ್ರ    

ನವದೆಹಲಿ: ಇಲ್ಲಿನ ಕಾಶ್ಮೀರಿ ಗೇಟ್ ಅಂತರರಾಜ್ಯ ಬಸ್ ಟರ್ಮಿನಲ್ (ಐಟಿಬಿಟಿ) ಸಮೀಪದ ಹನುಮಾನ್ ಮಂದಿರ ಪ್ರದೇಶದಲ್ಲಿರುವ ಸುಮಾರು ಒಂದು ಸಾವಿರಕ್ಕೂ ಹೆಚ್ಚಿನ ಭಿಕ್ಷುಕರಿಗೆ ರಾತ್ರಿ ತಂಗುದಾಣ ವ್ಯವಸ್ಥೆ ಕಲ್ಪಿಸಿ ಜನವರಿ ಮೊದಲ ವಾರದಲ್ಲಿ ಸ್ಥಳಾಂತರಿಸಲಾಗುವುದು.ಮುಂದಿನ ವರ್ಷ ಸೆಪ್ಟೆಂಬರ್‌ನಲ್ಲಿ ದೆಹಲಿಯಲ್ಲಿ ನಡೆಯಲಿರುವ ಜಿ–20 ಶೃಂಗಸಭೆಯ ನಿಮಿತ್ತ ಈ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹನುಮಾನ್ ಮಂದಿರ ಪ್ರದೇಶದಲ್ಲಿನ ಭಿಕ್ಷುಕರನ್ನು ತೆರವುಗೊಳಿಸಿ, ಅವರಿಗೆ ಇತರೆಡೆ ಆಶ್ರಯ ಕಲ್ಪಿಸುವಂತೆ ಕೋರಿ ಸರ್ಕಾರವು ಡಿ. 15ರಂದು ದೆಹಲಿಯ ನಗರ ಆಶ್ರಯ ಸುಧಾರಣಾ ಮಂಡಳಿಯನ್ನು (ಡಿಯುಎಸ್‌ಐಬಿ) ಕೇಳಿಕೊಂಡಿತ್ತು.

‘ಭಿಕ್ಷುಕರ ಸ್ಥಳಾಂತರಕ್ಕಾಗಿ ಕ್ರಿಯಾಯೋಜನೆ ಸಿದ್ಧಪಡಿಸಲು ಡಿಯುಎಸ್‌ಐಬಿಯ ಮುಖ್ಯ ಎಂಜಿನಿಯರ್ ನೇತೃತ್ವದಲ್ಲಿ ನಾಲ್ಕು ಸದಸ್ಯರ ಸಮಿತಿ ರಚಿಸಲಾಗಿದೆ. ಜನವರಿ ಮೊದಲ ವಾರದಲ್ಲಿ ಭಿಕ್ಷುಕರನ್ನು ಸ್ಥಳಾಂತರಿಸಲಾಗುವುದು’ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ADVERTISEMENT

ವಿರೋಧ: ಭಿಕ್ಷುಕರನ್ನು ಸ್ಥಳಾಂತರಿಸುವುದಕ್ಕೆ ದೆಹಲಿಯ ನಿರಾಶ್ರಿತರ ಕಲ್ಯಾಣ ಪರ ಕೆಲಸ ಮಾಡುತ್ತಿರುವ ಸರ್ಕಾರೇತರ ಸಂಸ್ಥೆಗಳು ವಿರೋಧ ವ್ಯಕ್ತಪಡಿಸಿವೆ. ಈ ರೀತಿಯ ಸ್ಥಳಾಂತರವು 2018ರಲ್ಲಿ ದೆಹಲಿ ಹೈಕೋರ್ಟ್ ನೀಡಿರುವ ಆದೇಶದ ಉಲ್ಲಂಘನೆ ಎಂದೂ ಎನ್‌ಜಿಒಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.