ADVERTISEMENT

ಆರಂಭಿಕ ಚಿತ್ರಗಳಲ್ಲಿ ಗಾಂಧಿ ವ್ಯಕ್ತಿತ್ವದ ಛಾಯೆ

ಸಂಜಯ್ ಸೂರಿ ಹೊಸ ಕೃತಿಯಲ್ಲಿ ಉಲ್ಲೇಖ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2019, 19:45 IST
Last Updated 12 ಆಗಸ್ಟ್ 2019, 19:45 IST
   

ನವದೆಹಲಿ: ಭಾರತೀಯ ಚಲನಚಿತ್ರಗಳ ನಾಯಕನ ‘ವ್ಯಕ್ತಿತ್ವ’ 1980ರವರೆಗೂ ಹೇಗಿತ್ತು ಎಂಬುದರ ಬಗ್ಗೆ ಕಲ್ಪನೆ ಇದೆಯೇ? ಆತನ ಮೇಲೆ ಮಹಾತ್ಮಗಾಂಧಿಯ ವ್ಯಕ್ತಿತ್ವದ ಛಾಯೆ ಇತ್ತು. ಅಥವಾ ಅದಕ್ಕಿಂತಲೂ ಉತ್ತಮವಾಗಿತ್ತೆ?

ಸಾಮಾನ್ಯವಾಗಿ ಆ ಕಾಲಘಟ್ಟದ ನಾಯಕ ಬಡ ಅಥವಾ ಮಧ್ಯಮ ವರ್ಗವನ್ನು ಪ್ರತಿನಿಧಿಸುತ್ತಿದ್ದ. ಅವನಲ್ಲಿ ಲೈಂಗಿಕ ಹಪಾಪಹಿತನ ಇರಲಿಲ್ಲ. ಬಹುತೇಕ ಸಾಮಾಜಿಕ ನ್ಯಾಯದ ಜ್ಯೋತಿಯನ್ನು ಎತ್ತಿಹಿಡಿಯುತ್ತಿದ್ದ.

ಇದಕ್ಕೆ ಬಲವಾದ ಕಾರಣ, ಸ್ವಾತಂತ್ರ್ಯಾನಂತರ ಹಲವು ದಶಕಗಳ ಕಾಲ ಚಿತ್ರ ನಿರ್ಮಾಪಕರ ಮೇಲೆ ಮಹಾತ್ಮಗಾಂಧಿ ಅವರ ಸಂಯಮ, ಸಾಮಾಜಿಕ ನ್ಯಾಯ, ಅಹಿಂಸೆಯ ಚಿಂತನೆಗಳು ಗಾಢವಾಗಿ ಪ್ರಭಾವ ಬೀರಿದ್ದುದೇ ಆಗಿತ್ತು. ಪ್ರೇಕ್ಷಕರ ಮೇಲೂ ಇವುಗಳ ಪ್ರಭಾವ ತಕ್ಕಮಟ್ಟಿಗೆ ಆಗಿತ್ತು.

ADVERTISEMENT

ಆರ್ಥಿಕ ಉದಾರೀಕರಣದ ಪರಿಣಾಮಗಳು ಹಂತ ಹಂತವಾಗಿ ಸಮಾಜ ಮತ್ತು ಹಾಗೆಯೇ, ಚಲನಚಿತ್ರಗಳ ಸ್ವರೂಪವನ್ನು ಬದಲಿಸಿತು ಎನ್ನುತ್ತಾರೆ ಲಂಡನ್‌ ಮೂಲಕ ಲೇಖಕ ಮತ್ತು ಪತ್ರಕರ್ತ ಸಂಜಯ್‌ ಸೂರಿ. ತನ್ನ ನೂತನ ಕೃತಿ ‘ಎ ಗಾಂಧಿಯನ್‌ ಅಫೈರ್: ಇಂಡಿಯಾ’ಸ್‌ ಕ್ಯೂರಿಯಸ್‌ ಪೋಟ್ರಯಲ್‌ ಆಫ್‌ ಲವ್ ಇನ್ ಸಿನಿಮಾ’ ಶೀರ್ಷಿಕೆಯ ಕೃತಿಯಲ್ಲಿ ಸೂರಿ ತಮ್ಮ ಈ ಸಿದ್ಧಾಂತವನ್ನು ಪ್ರತಿಪಾದಿಸುತ್ತಾರೆ.

ಚಲನಚಿತ್ರಗಳ ಬಹುತೇಕ ನಾಯಕರು –ರಾಜ್‌ ಕಪೂರ್‌, ಶಮ್ಮಿಕಪೂರ್‌, ದೇವ್ ಆನಂದ್‌ ಅಥವಾ ಮನೋಜ್‌ ಕುಮಾರ್– ಯಾರೇ ಇರಲಿ. ಅವರು ರಾಷ್ಟ್ರಪಿತನ ಪ್ರಭಾವಳಿಯಲ್ಲಿ ಇದ್ದರು. ಶಮ್ಮಿಕಪೂರ್‌ ನಾಯಕತ್ವದ ‘ರಾಜ್‌ ಕುಮಾರ್’ (1964) ಚಿತ್ರದ ನಾಯಕಿಯ ಹೋರಾಟ ಅಥವಾ ಉದ್ಯಮಿಗಳ ವಿರುದ್ಧ ಹೋರಾಟ ಹಾಗೂ ಬಂಡವಾಳಶಾಹಿಯೂ ಅಪರಾಧ ಎಂಬುದನ್ನು ಬಿಂಬಿಸಿದ ದಿಲೀಪ್‌ಕುಮಾರ್ ನಟನೆಯ ‘ನಯಾದೌರ್’ (1957) ಚಿತ್ರಗಳನ್ನು ಗಮನಿಸಬಹುದು.

‘ಆ ಕಾಲಘಟ್ಟದ ನಾಯಕ ಕಡ್ಡಾಯವಾಗಿ ಸಿರಿವಂತನಾಗಿದ್ದ, ನಂತರ ಅದರಿಂದ ವಿಮುಖನಾಗಿ ಹೊರಡುತ್ತಿದ್ದ. ಲೈಂಗಿಕ ಸಂಬಂಧದ ಅವಕಾಶಗಳನ್ನು ಕಡೆಗಣಿಸಿಬಿಡುತ್ತಿದ್ದ. ನಾಯಕತ್ವದ ಈ ಎರಡೂ ಸುಳ್ಳಾಗಿದ್ದವು’ ಎಂದು ಸೂರಿ ಹೇಳಿದರು. ಭಾನುವಾರ ಇಲ್ಲಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

ಅದು, ನಾಯಕತ್ವದ ಶರಣಾಗತಿ, ಅದು ವಿಜಯವಲ್ಲ. ಲೈಂಗಿಕತೆ ಮತ್ತು ಸಿರಿವಂತಿಕೆ ಎರಡೂ ಆ ಕಾಲಘಟ್ಟದ ಸಿನಿಮಾಗಳ ಅಥವಾ ದಕ್ಕೆ ಸಂಬಂದಿಸಿದವರ ಭಾಗವೇ ಆಗಿತ್ತು ಎಂದು ಹೇಳಿದರು. ಚಿತ್ರನಿರ್ಮಾಪಕರು ನಾಯಕನ ಲೈಂಗಿಕ ಅಭೀಷ್ಠೆಗಳನ್ನು ಒಂದಲ್ಲ ಒಂದು ರೀತಿಯಲ್ಲಿ ಹಾಡುಗಳ ಮೂಲಕ ಅಭಿವ್ಯಕ್ತಿಗೆ ಒತ್ತು ನೀಡುತ್ತಿದ್ದರು.

ಈ ಮಾತಿಗೆ ಉದಾಹರಣೆಯಾಗಿ ಅವರು ‘ಕಾನ್‌ ಮೇ ಜುಮ್ಕಾ..’ (ಸಾವನ್‌ ಭಡೊನ್), ‘ಆಸ್ಮಾ ಸೇ ಆಯಾ ಫರಿಷ್ತಾ...’ (ಆ್ಯನ್‌ ಈವನಿಂಗ್‌ ಇನ್‌ ಪ್ಯಾರಿಸ್) ಅನ್ನು ಉಲ್ಲೇಖಿಸುತ್ತಾರೆ.

ನೈತಿಕವಾಗಿ ಯಾವುದು ಸರಿ, ಸರಿಯಲ್ಲ ಎಂಬುದರ ಬಗ್ಗೆ ಚಿತ್ರಗಳು ಹೇಗೆ ಕಟ್ಟುನಿಟ್ಟಾಗಿದ್ದವು ಎಂಬುದನ್ನು ಪ್ರತಿಪಾದಿಸಲು ಅವರು ‘ಪ್ಯಾಸಾ’, ‘ಗೈಡ್’ ಚಿತ್ರಗಳಿಂದ ಇತ್ತೀಚಿನ ‘ದಿಲ್‌ವಾಲೆ ದುಲ್ಹನಿಯಾ ಲೇ ಜಾಯೇಂಗೆ’, ‘ಲಗೇ ರಹೊ ಮುನ್ನಾ ಭಾಯ್‌’ವರೆಗಿನ ವಿವಿಧ ಚಿತ್ರಗಳನ್ನು ಉದಾಹರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.