ADVERTISEMENT

ಮಕರ ಸಂಕ್ರಾಂತಿ: ಗಂಗಾಸಾಗರ ಮೇಳದಲ್ಲಿ ಲಕ್ಷಾಂತರ ಭಕ್ತರು ಭಾಗಿ, ಭಾರಿ ಜನದಟ್ಟಣೆ

ಪಿಟಿಐ
Published 14 ಜನವರಿ 2026, 6:47 IST
Last Updated 14 ಜನವರಿ 2026, 6:47 IST
<div class="paragraphs"><p>ಗಂಗಾಸಾಗರ ಮೇಳ</p></div>

ಗಂಗಾಸಾಗರ ಮೇಳ

   

‍ಪಿಟಿಐ ಚಿತ್ರ 

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ನಡೆಯುವ ಗಂಗಾಸಾಗರ ಮೇಳದಲ್ಲಿ ಲಕ್ಷಾಂತರ ಭಕ್ತರು ಭಾಗಿಯಾಗಿದ್ದು, ಭಾರಿ ಜನದಟ್ಟಣೆ ಉಂಟಾಗಿದೆ.

ADVERTISEMENT

ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ನಡೆಯುತ್ತಿರುವ ಈ ಮೇಳದಲ್ಲಿ ಕೊರೆಯುವ ಚಳಿಯನ್ನೂ ಲೆಕ್ಕಿಸದೆ ಗಂಗಾನದಿ ಮತ್ತು ಬಂಗಾಳಕೊಲ್ಲಿಯ ಸಂಗಮ ಸ್ಥಾನದಲ್ಲಿ ಲಕ್ಷಾಂತರ ಭಕ್ತರು ಪ್ರವಿತ್ರ ಸ್ನಾನ ಮಾಡಿದರು.

ಶಾಹಿ ಸ್ನಾನದ ಸಮಯ ಮಧ್ಯಾಹ್ನ ಶುರುವಾಗಲಿದೆ. ಆದರೆ ಈಗಾಗಲೇ ಲಕ್ಷಾಂತರ ಭಕ್ತರು ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ

ಪ್ರತಿ ವರ್ಷ ಈ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ರಾಜ್ಯದ ಎಲ್ಲ ಜಿಲ್ಲೆಗಳು ಸೇರಿದಂತೆ ಕೋಲ್ಕತ್ತದ ರೈಲ್ವೆ ನಿಲ್ದಾಣಗಳು ಮತ್ತು ಬಸ್ ನಿಲ್ದಾಣಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹೇಳಿದರು.

ಮೊದಲ ಬಾರಿಗೆ ರಕ್ಷಣಾ ಡ್ರೋನ್‌ಗಳನ್ನು ಕಣ್ಗಾವಲುಗಾಗಿ ನಿಯೋಜಿಸಲಾಗಿದೆ. ಈ ಡ್ರೋನ್‌ಗಳ ಸಹಾಯದಿಂದ ಕಪಿಲ ಮುನಿ ಆಶ್ರಮ ಮತ್ತು ಮುಖ್ಯ ಸ್ನಾನ ಘಟ್ಟಗಳ ಸುತ್ತಲೂ ಮೇಲ್ವಿಚಾರಣೆಯನ್ನು ನಡೆಸಲಾಗುತ್ತದೆ. ಈ ರಕ್ಷಣಾ ಡ್ರೋನ್‌ಗಳು 100 ಕೆ.ಜಿವರೆಗೆ ಭಾರವನ್ನು ಹೊತ್ತೊಯ್ಯುವ ಮತ್ತು ಸಂಕಷ್ಟದಲ್ಲಿರುವ ಯಾತ್ರಿಕರನ್ನು ತ್ವರಿತವಾಗಿ ಸ್ಥಳಾಂತರಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ದೇಶದ ವಿವಿಧ ರಾಜ್ಯಗಳಿಂದ ಜನರು ಈ ಮೇಳಕ್ಕೆ ಆಗಮಿಸಿದ್ದಾರೆ. ಕುಂಭಮೇಳದ ನಂತರ ಇದೇ ಅತಿ ದೊಡ್ಡ ಧಾರ್ಮಿಕ ಕಾರ್ಯಕ್ರಮ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.