ADVERTISEMENT

ಮೂರನೇ ತ್ರೈಮಾಸಿಕದಲ್ಲಿ‘ಇಒಎಸ್‌–03’ ಉಪಗ್ರಹಉಡಾವಣೆಗೆ ಸಿದ್ಧತೆ

ಪಿಟಿಐ
Published 29 ಜುಲೈ 2021, 11:10 IST
Last Updated 29 ಜುಲೈ 2021, 11:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ (ಪಿಟಿಐ): ಪ್ರವಾಹ, ಚಂಡಮಾರುತ ಸೇರಿ ಪ್ರಾಕೃತಿಕ ವಿಕೋಪಗಳನ್ನು ಮುಂದಾಗಿ ಗ್ರಹಿಸಲು ಭೂಚಲನೆಯ ಗತಿ ಅವಲೋಕಿಸುವ ‘ಇಒಎಸ್‌–03’ ಉಪಗ್ರಹವನ್ನು 2021ನೇ ಮೂರನೇ ತ್ರೈಮಾಸಿಕದಲ್ಲಿ ಉಡಾವಣೆ ಮಾಡಲಾಗುತ್ತದೆ.

ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಗುರುವಾರ ರಾಜ್ಯಸಭೆಯಲ್ಲಿ ಈ ಮಾಹಿತಿ ನೀಡಿದ್ದು, ಇಒಎಸ್‌–03 ಉಪಗ್ರಹವು ದೇಶದ ಭೌಗೋಳಿಕ ವ್ಯಾಪ್ತಿಯನ್ನು ದೈನಿಕ 4–5 ಬಾರಿ ಸೆರೆಹಿಡಿಯುವ ಸಾಮರ್ಥ್ಯವನ್ನು ಹೊಂದಿದೆ ಎಂದರು.

ಪ್ರಾಕೃತಿಕ ವಿಕೋಪಗಳನ್ನು ಹೊರತುಪಡಿಸಿ ಉಪಗ್ರಹವು ಜಲಮೂಲಗಳು, ಬೆಳೆ, ಅರಣ್ಯ ಪ್ರದೇಶಗಳ ನಾಶ, ಬೆಳವಣಿಗೆಗಳನ್ನು ಗಮನಿಸಿ, ಮಾಹಿತಿಗಳನ್ನು ಕಲೆಹಾಕಲಿದೆ ಎಂದು ತಿಳಿಸಿದರು.

ADVERTISEMENT

ಜತೆಗೆ ದೇಶಿಯವಾಗಿ ಅಭಿವೃದ್ಧಿಪಡಿಸಲಾದ ಸಣ್ಣ ಉಪಗ್ರಹ ಉಡಾವಣಾ ವಾಹಕದ (ಎಸ್ಎಸ್‌ಎಲ್‌ವಿ) ಪ್ರಯೋಗ 2021ರ ನಾಲ್ಕನೇ ತ್ರೈಮಾಸಿಕದಲ್ಲಿ ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ನಡೆಯಲಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.