
ಅಹಮದಾಬಾದ್: ಮಹಾತ್ಮ ಗಾಂಧಿ ಅವರ ಸಂದೇಶಗಳು ಇಂದಿನ ಕಾಲದಲ್ಲಿ ಹೆಚ್ಚು ಪ್ರಸ್ತುತವಾಗಿದೆ ಎಂದು ಜರ್ಮನ್ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್ ಅವರು ಸೋಮವಾರ ಹೇಳಿದ್ದಾರೆ.
ಫ್ರೆಡ್ರಿಕ್ ಮೆರ್ಜ್ ಅವರು ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಸಬರಮತಿ ಆಶ್ರಮಕ್ಕೆ ಆಗಮಿಸಿದ ಅವರನ್ನು ಪ್ರಧಾನಿ ಮೋದಿ ಅವರು ಸ್ವಾಗತಿಸಿದರು.
ಗಾಂಧಿ ಅವರ ಪರಂಪರೆಯು ಭಾರತ ಮತ್ತು ಜರ್ಮನ್ ದೇಶಗಳ ಬಾಂಧವ್ಯವನ್ನು ಗಟ್ಟಿಗೊಳಿಸಿದ್ದು, ಎರಡೂ ದೇಶಗಳು ಸ್ನೇಹದಿಂದ ಇರುವಂತೆ ಮಾಡಿದೆ ಎಂದು ಹೇಳಿದ್ದಾರೆ.
‘ಮಹಾತ್ಮ ಗಾಂಧಿ ಅವರ ಹೋರಾಟ ಹಾಗೂ ವ್ಯಕ್ತಿತ್ವವು ಪ್ರತಿಯೊಬ್ಬರಿಗೂ ಮಾದರಿಯಾಗಿದೆ. ಜಗತ್ತಿಗೆ ಈಗಲೂ ಅವರ ಸಂದೇಶಗಳ ಅವಶ್ಯಕತೆಯಿದೆ’ ಎಂದು ಸಬರಮತಿ ಆಶ್ರಮದ ಸಂದರ್ಶಕರ ಪುಸ್ತಕದಲ್ಲಿ ಬರೆದಿದ್ದಾರೆ.
ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದ ವೇಳೆ ಫ್ರೆಡ್ರಿಕ್ ಮೆರ್ಜ್ ಅವರು ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಪ್ರತಿಮೆಗೆ ಗೌರವ ಸಲ್ಲಿಸಿದರು. ಚರಕದ ಮೂಲಕ ಖಾದಿ ನೂಲುವುದನ್ನು ಗಮನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.