ADVERTISEMENT

78ನೆಯ ಸ್ವಾತಂತ್ರ್ಯ ದಿನಾಚರಣೆ| ಕಿಲಿಮಂಜಾರೊದಲ್ಲಿ ಅನಾವರಣಗೊಂಡ ತ್ರಿವರ್ಣ ಧ್ವಜ

ಪಿಟಿಐ
Published 10 ಆಗಸ್ಟ್ 2024, 14:17 IST
Last Updated 10 ಆಗಸ್ಟ್ 2024, 14:17 IST
<div class="paragraphs"><p>ಆಫ್ರಿಕಾ ಖಂಡದ ಅತ್ಯಂತ ಎತ್ತರದ ಪರ್ವತವಾದ ಕಿಲಿಮಂಜಾರೊದಲ್ಲಿ ಅನಾವರಣ ಮಾಡಲಾದ ತ್ರಿವರ್ಣ ಧ್ವಜ.</p></div>

ಆಫ್ರಿಕಾ ಖಂಡದ ಅತ್ಯಂತ ಎತ್ತರದ ಪರ್ವತವಾದ ಕಿಲಿಮಂಜಾರೊದಲ್ಲಿ ಅನಾವರಣ ಮಾಡಲಾದ ತ್ರಿವರ್ಣ ಧ್ವಜ.

   

–ಪಿಟಿಐ ಚಿತ್ರ

ನವದೆಹಲಿ: 78ನೆಯ ಸ್ವಾತಂತ್ರ್ಯ ದಿನಾಚರಣೆ ಹತ್ತಿರವಾಗುತ್ತಿರುವ ಹೊತ್ತಿನಲ್ಲಿ ಪರ್ವತಾರೋಹಿಗಳ ತಂಡವೊಂದು, ರಕ್ಷಣಾ ಸಚಿವಾಲಯದ ನೆರವು ಪಡೆದು, 7,800 ಚದರ ಅಡಿ ಗಾತ್ರದ ತ್ರಿವರ್ಣ ಧ್ವಜವನ್ನು ಆಫ್ರಿಕಾ ಖಂಡದ ಕಿಲಿಮಂಜಾರೊದ ಉಹುರು ಪರ್ವತದ ಶೃಂಗದಲ್ಲಿ ಅನಾವರಣ ಮಾಡಿದೆ.

ADVERTISEMENT

‘ಕನಸುಗಳನ್ನು ಈಡೇರಿಸಿಕೊಳ್ಳುವುದು ಎಷ್ಟೇ ಸವಾಲಿನದ್ದಾಗಿ ಕಂಡರೂ, ಅವುಗಳನ್ನು ನನಸಾಗಿಸಿಕೊಳ್ಳುವ ಸ್ಫೂರ್ತಿಯನ್ನು ಇದು ಅಂಗವಿಕಲರ ಮುಂದಿನ ತಲೆಮಾರಿನವರಲ್ಲಿ ಮೂಡಿಸುವ ಗುರಿಯನ್ನು ಹೊಂದಿದೆ‘ ಎಂದು ರಕ್ಷಣಾ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಈ ತಂಡವನ್ನು ಗ್ರೂಪ್ ಕ್ಯಾಪ್ಟನ್ ಜೈ ಕಿಷನ್ ಅವರು ಮುನ್ನಡೆಸಿದ್ದರು. ದೇಹದ ಅಂಗವೊಂದನ್ನು ಕಳೆದುಕೊಂಡಿರುವ ವ್ಯಕ್ತಿಯೊಬ್ಬರು ಊರುಗೋಲು ಬಳಸಿಕೊಂಡು ಇದೇ ಮೊದಲ ಬಾರಿಗೆ ಈ ಶೃಂಗವನ್ನು ಏರಿದ್ದಾರೆ ಎಂದು ಕೂಡ ಪ್ರಕಟಣೆಯಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.