ADVERTISEMENT

ಆಗಸ್ಟ್‌ 15ಕ್ಕೆ ರಿಲಯನ್ಸ್‌ ’ಜಿಯೊ ಗಿಗಾ ಫೈಬರ್‌’ ಬ್ರಾಡ್‌ಬ್ಯಾಂಡ್‌

ಪಿಟಿಐ
Published 5 ಜುಲೈ 2018, 10:39 IST
Last Updated 5 ಜುಲೈ 2018, 10:39 IST
ಜಿಯೊ ಗಿಗಾಫೈಬರ್‌ ಘೋಷಣೆ 
ಜಿಯೊ ಗಿಗಾಫೈಬರ್‌ ಘೋಷಣೆ    

ಮುಂಬೈ: ಜಿಯೊ ಸಿಮ್‌ಗಳ ಮೂಲಕ ಉಚಿತ ಕರೆ ಮತ್ತು ಅಗ್ಗದ ದರದಲ್ಲಿ ಡಾಟಾ ಪೂರೈಸುತ್ತಿರುವ ರಿಲಯನ್ಸ್‌ ಗುರುವಾರ ಸ್ಥಿರ ಬ್ರಾಂಡ್‌ಬ್ಯಾಂಡ್‌ ಇಂಟರ್‌ನೆಟ್‌ ಸೇವೆ ಪ್ರಾರಂಭಿಸುವುದಾಗಿ ಘೋಷಿಸಿದೆ.

ಭಾರತದ ಶ್ರೀಮಂತ ಉದ್ಯಮಿ ಮುಖೇಶ್‌ ಅಂಬಾನಿ, ಉಚಿತ ಕರೆ ಸೌಲಭ್ಯ ಒದಗಿಸುವ ಮೂಲಕ ದೇಶದ ಮೊಬೈಲ್‌ ಮಾರುಕಟ್ಟೆ ತಲೆಕೆಳಗಾಗುವ ಸ್ಥಿತಿ ಸೃಷ್ಟಿಯಾಗಿತ್ತು. ಇದೀಗ ’ಜಿಯೊ ಗಿಗಾ ಫೈಬರ್’ ಮೂಲಕ ಅಂಬಾನಿ ಸ್ಥಿರ ಬ್ರಾಡ್‌ಬ್ಯಾಂಡ್‌ ಇಂಟರ್‌ನೆಟ್‌ ಸೇವಾ ಕ್ಷೇತ್ರ ಪ್ರವೇಶಿಸಲಿದ್ದಾರೆ.

ದೇಶದ 1,100 ನಗರಗಳಿಗೆ ಫೈಬರ್ ಬ್ರಾಡ್‌ಬ್ಯಾಂಡ್‌ ಸೇವೆ ಪೂರೈಕೆ ಪ್ರಾರಂಭಿಸಲಿದ್ದೇವೆ. ಮನೆಗಳಿಗೆ, ವ್ಯಾಪಾರಿಗಳಿಗೆ, ಸಣ್ಣ ಮತ್ತು ಮಧ್ಯಮ ಉದ್ಯಮಗಳಲ್ಲಿ ಹಾಗೂ ಬೃಹತ್‌ ಉದ್ಯಮಗಳಿಗೆ ಬ್ರಾಡ್‌ಬ್ಯಾಂಡ್‌ ಸೇವೆ ವಿಸ್ತರಿಸುವುದಾಗಿಅಂಬಾನಿ ಹೂಡಿಕೆದಾರರಿಗೆ ತಿಳಿಸಿದ್ದಾರೆ.

ADVERTISEMENT

ಯೋಜಿತ ಫೈಬರ್‌ ಬ್ರಾಡ್‌ಬ್ಯಾಂಡ್‌ ವ್ಯವಸ್ಥೆ ಅತ್ಯಾಧುನಿಕವಾಗಿರಲಿದ್ದು, ಆಗಸ್ಟ್‌ 15ರಂದು ಜಿಯೊ ಗಿಗಾ ಫೈಬರ್‌ ಬಿಡುಗಡೆಯಾಗುವುದಾಗಿ ಘೋಷಿಸಿದ್ದಾರೆ.

ಪ್ರಸ್ತುತ ಮನೆಗಳಿಗೆ ಭಾರತಿ ಏರ್‌ಟೆಲ್‌, ಟಾಟಾ ಡೊಕೊಮಾ ಹಾಗೂ ಸರ್ಕಾರಿ ಸ್ವಾಮ್ಯದ ಬಿಎಸ್ಎನ್‌ಎಲ್‌ ಬ್ರಾಡ್‌ಬ್ಯಾಂಡ್‌ ಸೇವೆ ಒದಗಿಸುತ್ತಿವೆ.

ಜಿಯೊ ಘೋಷಣೆಯಾಗಿ 22 ತಿಂಗಳಲ್ಲಿ 21.5 ಕೋಟಿ ಗ್ರಾಹಕರನ್ನು ಸಂಪಾದಿಸಿದೆ.

ಇದೇ ಸಂದರ್ಭದಲ್ಲಿ ಜಿಯೊ ಸ್ಮಾರ್ಟ್‌ಫೋನ್‌ ಸಾಧನಗಳನ್ನೂ ಪ್ರಕಟಿಸಲಾಗಿದೆ. ಆಡಿಯೊ ಮತ್ತು ವಿಡಿಯೊ ಡಾಂಗಲ್‌, ಸ್ಮಾರ್ಟ್‌ ಸ್ಪೀಕರ್‌, ವೈ–ಫೈ ಎಕ್ಸ್‌ಟೆಂಡರ್‌, ಸ್ಮಾರ್ಟ್‌ ಪ್ಲಗ್‌, ಟಿವಿ ಕ್ಯಾಮೆರಾಹಾಗೂ ಇನ್ನಷ್ಟು.

ಜಿಯೊಗಿಗಾ ಟಿವಿ: ಧ್ವನಿ ಮೂಲಕ ಸೂಚನೆ ನೀಡಬಹುದಾದ ವ್ಯವಸ್ಥೆಯನ್ನು ಜಿಯೊಗಿಗಾ ಟಿವಿ ಒಳಗೊಂಡಿರಲಿದೆ. ವಿವಿಧ ಪ್ರಾದೇಶಿಕ ಭಾಷೆಗಳಲ್ಲಿಯೂ ಧ್ವನಿ ಸೂಚನೆ ಲಭ್ಯವಿರಲಿದೆ. ಈ ಮೂಲಕ ವಿಡಿಯೊ ಕಾಲಿಂಗ್‌ ಸೌಲಭ್ಯವೂ ಸಿಗಲಿದೆ. ವರ್ಚುವಲ್‌ ರಿಯಾಲಿಟಿ ಸೌಲಭ್ಯಗಳೂ ಇರಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.