ADVERTISEMENT

ಗಿರಿರಾಜ್‌ ಸಿಂಗ್‌ಗೆ ನೋಟಿಸ್

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2019, 18:13 IST
Last Updated 29 ಏಪ್ರಿಲ್ 2019, 18:13 IST
ಗಿರಿರಾಜ್ ಸಿಂಗ್
ಗಿರಿರಾಜ್ ಸಿಂಗ್   

ನವದೆಹಲಿ: ಬಿಹಾರದ ಬೇಗುಸರಾಯ್‌ನಲ್ಲಿ ಚುನಾವಣಾ ಪ್ರಚಾರದ ವೇಳೆ ಕೋಮು ಭಾವನೆ ಕೆರಳಿಸುವ ಹೇಳಿಕೆ ನೀಡಿದ ಆರೋಪದ ಮೇಲೆ ಬಿಜೆಪಿ ಅಭ್ಯರ್ಥಿ ಗಿರಿರಾಜ್ ಸಿಂಗ್‌ಗೆ ಚುನಾವಣಾ ಆಯೋಗ ಸೋಮವಾರ ನೋಟಿಸ್ ನೀಡಿದೆ. ಉತ್ತರಿಸಲು 24 ಗಂಟೆ ಗಡುವು ನೀಡಿದೆ.

ನೀತಿ ಸಂಹಿತೆ ಉಲ್ಲಂಘನೆ ಆಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದಿರುವ ಆಯೋಗ, ಚುನಾವಣೆಯಲ್ಲಿ ಜಾತಿ ಹಾಗೂ ಧರ್ಮವನ್ನು ಬಳಸಿಕೊಳ್ಳುವುದು ಸುಪ್ರೀಂ ಕೋರ್ಟ್‌ ಆದೇಶದ ಸ್ಪಷ್ಟ ಉಲ್ಲಂಘನೆಯಾಗುತ್ತದೆ ಎಂದೂ ಅಭಿಪ್ರಾಯಪಟ್ಟಿದೆ.

ಏಪ್ರಿಲ್ 24ರಂದು ಬೇಗುಸರಾಯ್‌ನಲ್ಲಿ ಮಾತನಾಡಿದ್ದ ಗಿರಿರಾಜ್ ಸಿಂಗ್, ‘ಯಾರು ವಂದೇ ಮಾತರಂ ಹೇಳುವುದಿಲ್ಲವೋ ಅಥವಾ ತಾಯ್ನಾಡಿಗೆ ಗೌರವ ನೀಡುವುದಿಲ್ಲವೋ ಅವರನ್ನು ದೇಶ ಕ್ಷಮಿಸುವುದಿಲ್ಲ. ನನ್ನ ಪೂರ್ವಜರು ಮೃತಪಟ್ಟಾಗ ಅವರ ಸಮಾಧಿಗೆ ಸ್ಥಳದ ಅಭಾವ ಇರಲಿಲ್ಲ. ಆದರೆ ನಿಮಗೆ ಮೂರಡಿ ಜಾಗವಾದರೂ ಬೇಡವೇ‘ ಎಂದು ಮತದಾರರನ್ನು ಉದ್ದೇಶಿಸಿ ಹೇಳಿದ್ದರು. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರೂಈ ವೇಳೆ ಉಪಸ್ಥಿತರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.