ADVERTISEMENT

ಸೈಕಲ್‌ಗಾಗಿ ಕೂಡಿಟ್ಟುಕೊಂಡಿದ್ದ ಹಣ ಸಂತ್ರಸ್ತರಿಗೆ ನೀಡಿದ ಬಾಲಕಿಗೆ ಉಡುಗೊರೆ

ಏಜೆನ್ಸೀಸ್
Published 21 ಆಗಸ್ಟ್ 2018, 11:31 IST
Last Updated 21 ಆಗಸ್ಟ್ 2018, 11:31 IST
ಪ್ರೀತಿಯ ಸೈಕಲ್‌ನೊಂದಿಗೆ ಅನುಪ್ರಿಯಾ
ಪ್ರೀತಿಯ ಸೈಕಲ್‌ನೊಂದಿಗೆ ಅನುಪ್ರಿಯಾ   

ತಮಿಳುನಾಡು: ಸೈಕಲ್‌ ಕೊಳ್ಳಲು ಹುಂಡಿಯಲ್ಲಿ ಸಂಗ್ರಹಿಸಿದ್ದ ಹಣವನ್ನು ಕೇರಳದ ಪ್ರವಾಹ ಸಂತ್ರಸ್ತರಿಗೆ ನೀಡಿದ್ದ ತಮಿಳುನಾಡಿನ ವಿಲ್ಲುಪುರದ ಪುಟ್ಟ ಪೋರಿ ಅನುಪ್ರಿಯಾಳ ಮಾನವೀಯ ಗುಣಕ್ಕೆ ಎಲ್ಲೆಡೆಯಿಂದ ಗುಣಗಾನ ಕೇಳಿಬಂದಿತ್ತು. ಅವಳ ಈ ದೊಡ್ಡಮನಸ್ಸನ್ನು ಮೆಚ್ಚಿ ಹಿರೋ ಕಂಪನಿಯೇ ಸಣ್ಣ ಸೈಕಲ್‌ವೊಂದನ್ನು ಉಡುಗೊರೆಯಾಗಿ ನೀಡಿದೆ.

ಕೇರಳದಲ್ಲಾಗಿರುವ ಪ್ರವಾಹದಿಂದಸಂತ್ರಸ್ತರಾಗಿರುವವರ ನೆರವಿಗೆದೇಶದ ವಿವಿಧೆಡೆಯಿಂದ ಜನಸ್ಪಂದಿಸುತ್ತಿದ್ದಾರೆ. ಬೈಸಿಕಲ್‌ ಕೊಳ್ಳಲೆಂದು 4 ವರ್ಷದಿಂದ ಸಂಗ್ರಹಿಸಿದ್ದ ₹ 9,000 ಹಣವನ್ನು ದೇಣಿಗೆ ನೀಡುವ ಮೂಲಕ ಎರಡನೆ ತರಗತಿಯ ಎಸ್‌.ಅನುಪ್ರಿಯಾಮಾನವೀಯತೆ ಮೆರೆದಿದ್ದಳು.

ತನ್ನ ಸ್ವಂತ ಹಣದಲ್ಲಿ ಸೈಕಲ್‌ ತೆಗೆದುಕೊಳ್ಳುವುದು ಅವಳ ಕನಸಗಿದ್ದು ಹಣವನ್ನು ಸಂಗ್ರಹಿಸಿದ್ದಳು. ತಮಿಳುನಾಡಿನಲ್ಲಿ ಕೇರಳ ಸಂತ್ರಸ್ತರಿಗೆಂದು ದೇಣಿಗೆ ಸಂಗ್ರಹಿಸುತ್ತಿದ್ದನ್ನು ಕಂಡ ಆಕೆ ಹಣವನ್ನುನೀಡಿದ್ದಾಳೆ.ಇದನ್ನುಸ್ಥಳೀಯ ಪತ್ರಿಕೆಯೊಂದು ಸುದ್ದಿ ಮಾಡಿತ್ತು.ಸುದ್ದಿಯನ್ನು ಕಂಡು ಆಕೆಯ ಮಾನವೀಯತೆಯನ್ನು ಮೆಚ್ಚಿ ಯತಿರಾಜನ್‌ ಶ್ರೀನಿವಾಸನ್‌ ಎಂಬುವವರುದೇಣಿಗೆ ಹಾಗೂ ಆಕೆಯ ಸೈಕಲ್‌ ಕೊಳ್ಳುವಿಕೆಯ ಕನಸ್ಸಿನ ಬಗ್ಗೆ ಮಾಹಿತಿಯಟ್ವೀಟ್‌ ಮಾಡಿದ್ದರು.

ADVERTISEMENT

ಶ್ರೀನಿವಾಸನ್‌ ಅವರ ಟ್ವೀಟ್‌ನ್ನು ಕಂಡ ಹೀರೋ ಸೈಕಲ್‌ ಕಂಪನಿಯವರು ಆಕೆಯ ಕಾರ್ಯಕ್ಕೆಮೆಚ್ಚುಗೆ ವ್ಯಕ್ತಪಡಿಸಿ.ಪ್ರೀತಿಯಿಂದ ಒಂದು ಬೈಸಿಕಲ್‌ ಅನ್ನು ಉಡುಗೊರೆಯಾಗಿ ನೀಡುವುದಾಗಿ ಪ್ರತಿಕ್ರಿಸಿದ್ದರು. ಹೇಳಿದ ಮಾತಿನಂತೆ ಆ ಕಂಪನಿಯವರು ಬಾಲಕಿಯನ್ನು ಸೈಕಲ್‌ ಅಂಗಡಿಗೆ ಕರೆದುಕೊಂಡು ಹೋಗಿ, ಆಕೆ ಬಯಸಿದ ಸೈಕಲ್‌ ಅನ್ನೆ ಉಡುಗೊರೆಯಾಗಿ ನೀಡಿದ್ದಾರೆ.

ಪ್ರೀತಿಯ ಅನುಪ್ರಿಯ ನಿನ್ನ ಮಾನವೀಯ ಗುಣವನ್ನು ಪ್ರಶಂಸಿಸುತ್ತೇವೆ.ನಿನಗೆ ಹೀರೋ ಸೈಕಲ್‌ ಕಡೆಯಿಂದ ಸೈಕಲ್‌ಅನ್ನು ಬಹುಮಾನವಾಗಿ ನೀಡುತ್ತೇವೆ ಬೇಗ ನಿಮ್ಮ ವಿಳಾಸ ಅಥವಾಸಂಪರ್ಕಿಸಿ @herocycles.com ಎಂದು ಹೀರೋ ಕಂಪನಿ ಟ್ವಿಟ್ಟಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.