ನವದೆಹಲಿ: ಇಬ್ಬರು ಉಗ್ರರು ಶರಣಾಗಿರುವ ಎರಡು ವಿಡಿಯೊಗಳನ್ನು ಭಾರತೀಯ ಸೇನೆ ಬಿಡುಗಡೆ ಮಾಡಿದ್ದು ಈ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಕಾಶ್ಮೀರದಲ್ಲಿ ಭಾರತೀಯ ಸೇನೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರನ್ನು ಬಂಧಿಸಿದೆ. ಒಂದು ವಿಡಿಯೊದಲ್ಲಿ 20 ವರ್ಷದ ಉಗ್ರನೊಬ್ಬ ಶರಣಾಗಿದ್ದಾನೆ. ಬಂದೂಕು ಬಿಸಾಡಿ, ಎರಡು ಕೈಗಳನ್ನು ಮೇಲೆ ಎತ್ತಿದ್ದಾಗ ಯೋಧನೊಬ್ಬ ಯಾರು ಶೂಟ್ ಮಾಡಬೇಡಿ ಎಂದು ತನ್ನ ಸಹದ್ಯೋಗಿಗಳಿಗೆ ಹೇಳುತ್ತಾರೆ. ನಂತರ ಆ ಉಗ್ರನಿಗೆ ಕುಡಿಯಲು ನೀರು ಕೊಟ್ಟು, ನಾವು ಏನು ಮಾಡವುದಿಲ್ಲ ಎಂದು ಯೋಧರು ಹೇಳುತ್ತಾರೆ. ಈ ಉಗ್ರ ಕೆಲ ದಿನಗಳ ಹಿಂದಷ್ಟೆ ಭಯೋತ್ಪಾದನೆ ತಂಡವನ್ನು ಸೇರಿಕೊಂಡಿದ್ದ.
ಮತ್ತೊಂದು ವಿಡಿಯೊದಲ್ಲಿ ಸೇನಾ ಯೋಧರು ಯುವಕನೊಬ್ಬನನ್ನು ಅವರ ತಂದೆಗೆ ಒಪ್ಪಿಸಿ, ಮತ್ತೆ ಉಗ್ರ ಸಂಘಟನೆಯತ್ತ ಹೋಗದಂತೆ ನೋಡಿಕೊಳ್ಳಿ ಎಂದು ಹೇಳಿದ್ದಾರೆ. ಅದೇ ವಿಡಿಯೊದಲ್ಲಿ ತಂದೆ ಮಗನನ್ನು ಅಪ್ಪಿಕೊಂಡು ಯೋಧರಿಗೆ ಧನ್ಯವಾದ ತಿಳಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.