ADVERTISEMENT

ಗೋವಾ ನೈಟ್‌‌ಕ್ಲಬ್‌ ಬೆಂಕಿ ಅವಘಡ: ಆರೋಪಿ ವಿರುದ್ಧ ಬ್ಲೂ ಕಾರ್ನರ್ ನೋಟಿಸ್‌

ಪಿಟಿಐ
Published 20 ಡಿಸೆಂಬರ್ 2025, 15:58 IST
Last Updated 20 ಡಿಸೆಂಬರ್ 2025, 15:58 IST
<div class="paragraphs"><p>ಬ್ರಿಚ್ ಬೈ ರೋಮಿಯೊ ಲೇನ್ ನೈಟ್‌ಕ್ಲಬ್ ಹೊರಗೆ ಪೊಲೀಸರು&nbsp;</p></div>

ಬ್ರಿಚ್ ಬೈ ರೋಮಿಯೊ ಲೇನ್ ನೈಟ್‌ಕ್ಲಬ್ ಹೊರಗೆ ಪೊಲೀಸರು 

   

ಪಣಜಿ: ಗೋವಾದ ಅರ್ಪೋರಾದಲ್ಲಿರುವ ನೈಟ್‌‌ಕ್ಲಬ್‌ನಲ್ಲಿ ಬೆಂಕಿ ಅವಘಡಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಅರೋಪಿಯಾಗಿರುವ ಬ್ರಿಟನ್‌ ಪ್ರಜೆ ಸುರಿಂದರ್ ಕುಮಾರ್ ಖೋಸ್ಲಾ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಲು ಗೋವಾದ ಪೊಲೀಸರು ಪ್ರಕ್ರಿಯೆ ಪ್ರಾರಂಭಿಸಿದ್ದಾರೆ ಎಂದು ಹಿರಿಯ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಡಿಸೆಂಬರ್ 6ರಂದು ಸಂಭವಿಸಿದ ದುರಂತದಲ್ಲಿ 25 ಜನರು ಮೃತಪಟ್ಟಿದ್ದರು. ಘಟನೆ ಸಂಭವಿಸುವಾಗ ಖೋಸ್ಲಾ ಗೋವಾದಲ್ಲಿ ಇದ್ದರು, ನಂತರ ಬಹುಷಃ ಮರುದಿನ ಅವರು ಬ್ರಿಟನ್‌ಗೆ ಪಲಾಯನ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ. ದುರಂತ ಸಂಭವಿಸಿದ ‘ಬಿರ್ಚ್‌ ಬೈ ರೋಮಿಯೊ ಲೇನ್’ ನೈಟ್‌ಕ್ಲಬ್‌ನ ಮಾಲೀಕರಲ್ಲಿ ಖೋಸ್ಲಾ ಕೂಡಾ ಒಬ್ಬರು ಎಂದು ನಂಬಲಾಗಿದೆ  

ADVERTISEMENT

‘ಅವರನ್ನು ಕರೆತರಲು ಬ್ಲೂ ಕಾರ್ನರ್ ನೋಟಿಸ್ ಹೊರಡಿಸುವ ಪ್ರಕ್ರಿಯೆ ಪ್ರಾರಂಭಿಸಿದ್ದೇವೆ. ಇದನ್ನು ಪೂರ್ಣಗೊಳಿಸಲು ಕೇಂದ್ರೀಯ ಏಜೆನ್ಸಿಗಳೊಂದಿಗೆ ಅಗತ್ಯವಿರುವ ಔಪಚಾರಿಕ ಕಾರ್ಯಗಳನ್ನು ಪ್ರಾರಂಭಿಸಲಾಗುತ್ತಿದೆ’ ಎಂದು ಅವರು ತಿಳಿಸಿದ್ದಾರೆ.

ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ, ಅಜಯ್ ಗುಪ್ತಾ ಮತ್ತು ಇತರ ಐದು ಮಂದಿ ಸೇರಿದಂತೆ ಎಂಟು ಜನರನ್ನು ಪೊಲೀಸರು ಇದುವರೆಗೆ ಬಂಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.