ADVERTISEMENT

ಗೋವಾ ನೈಟ್‌ಕ್ಲಬ್‌ ಅಗ್ನಿ ದುರಂತ: ಸಿವಿಲ್‌ ಅರ್ಜಿ ಪಿಐಎಲ್‌ ಆಗಿ ಪರಿವರ್ತನೆ

ಪಿಟಿಐ
Published 15 ಡಿಸೆಂಬರ್ 2025, 15:33 IST
Last Updated 15 ಡಿಸೆಂಬರ್ 2025, 15:33 IST
<div class="paragraphs"><p>ಗೋವಾ ಅಗ್ನಿ ದುರಂತ</p></div>

ಗೋವಾ ಅಗ್ನಿ ದುರಂತ

   

ಪಣಜಿ: ಬಾಂಬೆ ಹೈಕೋರ್ಟ್‌ನ ಗೋವಾ ವಿಭಾಗೀಯ ಪೀಠವು ‘ಬರ್ಚ್‌ ಬೈ ರೋಮಿಯೊ ಲೇನ್‌’ ನೈಟ್‌ ಕ್ಲಬ್‌ ವಿರುದ್ಧದ ಸಿವಿಲ್ ಪ್ರಕರಣವನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಗಿ (ಪಿಐಎಲ್‌) ಪರಿವರ್ತಿಸಿದೆ.

ಡಿಸೆಂಬರ್ 6ರಂದು ಈ ನೈಟ್‌ಕ್ಲಬ್‌ನಲ್ಲಿ ನಡೆದ ಅಗ್ನಿ ದುರಂತದಲ್ಲಿ 25 ಮಂದಿ ಮೃತಪಟ್ಟಿದ್ದರು.

ADVERTISEMENT

ನ್ಯಾಯಮೂರ್ತಿಗಳಾದ ಸಾರಂಗ್‌ ಕೊತ್ವಾಲ್‌ ಮತ್ತು ಪೃಥ್ವಿರಾಜ್‌ ಚವಾಣ್‌ ನೇತೃತ್ವದ ವಿಭಾಗೀಯ ನ್ಯಾಯಪೀಠವು, ‘ಇಂಥ ಪ್ರಕರಣಗಳಲ್ಲಿ ಯಾರನ್ನಾದರೂ ಹೊಣೆ ಮಾಡಲೇಬೇಕಿದೆ’ ಎಂದು ಅದು ತಿಳಿಸಿದೆ.

ಇದೇ ವೇಳೆ, ದುರಂತ ಸಂಭವಿಸಿದ ನೈಟ್‌ಕ್ಲಬ್‌ಗೆ ನೀಡಿದ್ದ ಪರವಾನಗಿ ಪ್ರಕ್ರಿಯೆ ಕುರಿತು ಪ್ರತಿಕ್ರಿಯೆ ನೀಡುವಂತೆ ರಾಜ್ಯ ಸರ್ಕಾರವನ್ನು ಕೇಳಿದೆ. ಬಳಿಕ ನ್ಯಾಯಾಲಯವು ಜನವರಿ 8ಕ್ಕೆ ವಿಚಾರಣೆಯನ್ನು ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.