ADVERTISEMENT

ಗೋವಾ ನೈಟ್‌ಕ್ಲಬ್ ದುರಂತ: ಮೂವರು ಅಧಿಕಾರಿಗಳನ್ನು ವಜಾ ಮಾಡಿದ ಸರ್ಕಾರ

ಪಿಟಿಐ
Published 8 ಡಿಸೆಂಬರ್ 2025, 2:14 IST
Last Updated 8 ಡಿಸೆಂಬರ್ 2025, 2:14 IST
<div class="paragraphs"><p>ದುರಂತದಲ್ಲಿ ಸುಟ್ಟು ಕರಕಲಾಗಿರುವ ನೈಟ್ ಕ್ಲಬ್</p></div>

ದುರಂತದಲ್ಲಿ ಸುಟ್ಟು ಕರಕಲಾಗಿರುವ ನೈಟ್ ಕ್ಲಬ್

   

– ಪಿಟಿಐ ಚಿತ್ರ

ಪಣಜಿ: ನೈಟ್‌ಕ್ಲಬ್ ಅಗ್ನಿ ದುರಂತ ಸಂಬಂಧ ಪಂಚಾಯತ್‌ನ ಮಾಜಿ ನಿರ್ದೇಶಕ ಸೇರಿ ಮೂವರು ಅಧಿಕಾರಿಗಳನ್ನು ಗೋವಾ ಸರ್ಕಾರ ಅಮಾನತು ಮಾಡಿದೆ. 2023ರಲ್ಲಿ ಕ್ಲಬ್ ಕಾರ್ಯಾಚರಣೆಗೆ ಅನುಮತಿ ನೀಡುವಲ್ಲಿ ಇವರ ಪಾತ್ರ ಇರುವುದರಿಂದ ವಜಾ ಮಾಡಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಶನಿವಾರ ರಾತ್ರಿ ನಡೆದ ಭಾರಿ ಅಗ್ನಿ ದುರಂತದಿಂದಾಗಿ ಐವರು ಪ್ರವಾಸಿಗರು ಹಾಗೂ 20 ಸಿಬ್ಬಂದಿ ಸೇರಿ ಒಟ್ಟು 25 ಮಂದಿ ಸಾವಿಗೀಡಾಗಿದ್ದರು.

ಕ್ಲಬ್ ಆರಂಭವಾಗುವಾಗ ಪಂಚಾಯತ್ ನಿರ್ದೇಶಕರಾಗಿದ್ದ ಸಿದ್ಧಿ ತುಶಾರ್ ಹರ್ಲಾಂಖರ್, ಗೋವಾ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಜಿ ಸದಸ್ಯ ಡಾ. ಶಮಿಲಾ ಮೋಂತೆರೊ ಹಾಗೂ ಅರ್ಪೊರಾ–ನಗೋವಾ ಗ್ರಾಮ ಪಂಚಾಯತ್‌ನ ಮಾಜಿ ಕಾರ್ಯದರ್ಶಿ ರಘುವೀರ್ ಭಗ್‌ಕರ್ ಅಮಾನತುಗೊಂಡವರು.

ದುರಂತ ನಡೆದ ‘ಬರ್ಚ್ ಬೈ ರೋಮಿಯೊ ಲೇನ್’ ನೈಟ್‌ಕ್ಲಬ್‌ 2023ರಲ್ಲಿ ಕಾರ್ಯಾಚರಣೆ ಆರಂಭಿಸಿತ್ತು. ಕಾರ್ಯಾಚರಣೆಗೆ ಅನುಮತಿ ನೀಡಿದವರನ್ನು ಹೊಣೆಗಾರರನ್ನಾಗಿ ಮಾಡಲಾಗಿದೆ ಎಂದು ಹಿರಿಯ ಅಧಿಕಾರಿ ಹೇಳಿದ್ದಾರೆ.

ನೈಟ್‌ ಕ್ಲಬ್‌ಗೆ ವ್ಯಾಪಾರ ಪರವಾನಗಿ ನೀಡಿದ ಅರ್ಪೊರಾ–ನಗೋವಾ ಪಂಚಾಯತ್‌ನ ಸರಪಂಚ ರೋಷನ್ ರೆಡ್ಕರ್ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.