
ಪಣಜಿ: ಉದ್ದೇಶಿತ ಗೋವಾ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೇಮಿಸಿದ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ಸಲ್ಲಿಸಿರುವ ವರದಿಯನ್ನು ಪರಿಶೀಲಿಸಿದ ಬಳಿಕ ನಿರ್ಧಾರ ಕೈಗೊಳ್ಳಲಾಗುವುದು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ತಿಳಿಸಿದ್ದಾರೆ.
‘ಹುಲಿ ಸಂರಕ್ಷಿತ ಪ್ರದೇಶಕ್ಕೆ ಸಂಬಂಧಿಸಿದಂತೆ ನಮಗೆ ಇನ್ನೂ ಯಾವುದೇ ವರದಿ ಬಂದಿಲ್ಲ. ವರದಿಯನ್ನು ಪರಿಶೀಲಿಸಿ, ಅದನ್ನು ಹೇಗೆ ಕಾರ್ಯರೂಪಕ್ಕೆ ತರಬೇಕು ಎಂದು ನಿರ್ಧರಿಸುತ್ತೇವೆ. ವರದಿಯನ್ನು ಪರಿಶೀಲಿಸದೆ ಅದರ ಕುರಿತು ಪ್ರತಿಕ್ರಿಯೆ ನೀಡುವುದು ನ್ಯಾಯವಲ್ಲ’ ಎಂದು ಸಾವಂತ್ ಹೇಳಿದರು.
ನೇತ್ರಾವಳಿ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ 50 ಹಾಗೂ ಕೋಟಿಗಾವೊ ವನ್ಯಜೀವಿಧಾಮ ಪ್ರದೇಶ ವ್ಯಾಪ್ತಿಯಲ್ಲಿ 41 ಮನೆಗಳಿವೆ. ಹೀಗಾಗಿ ಈ ವನ್ಯಜೀವಿಧಾಮಗಳನ್ನು ಉದ್ದೇಶಿತ ಗೋವಾ ಹುಲಿ ಸಂರಕ್ಷಿತ ಪ್ರದೇಶದ ಮೊದಲ ಹಂತದ ವ್ಯಾಪ್ತಿಗೆ ಸೇರಿಸಬೇಕು. ಭಗವನ್ ಮಹಾವೀರ್ ವನ್ಯಜೀವಿಧಾಮ ಮತ್ತು ಮಹಾದೈ ವನ್ಯಜೀವಿಧಾಮ ಪ್ರದೇಶದಲ್ಲಿ ಹೆಚ್ಚು ವಸತಿ ಪ್ರದೇಶಗಳಿದ್ದು, ಇವುಗಳನ್ನು ಸಂರಕ್ಷಿತ ಪ್ರದೇಶದ ಮೊದಲ ಹಂತಕ್ಕೆ ಸೇರಿಸಬಾರದು ಎಂದು ಸಿಇಸಿ ವರದಿ ಶಿಫಾರಸು ಮಾಡಿದೆ.
ರಾಜ್ಯ ಸರ್ಕಾರ ಈ ಪ್ರದೇಶವನ್ನು ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಿಸುವಂತೆ ಆದೇಶಿಸಬೇಕೆಂದು ಗೋವಾ ಫೌಂಡೇಶನ್ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.