ADVERTISEMENT

ಸ್ಮಾರಕ ಸಮೀಪ ಕಾಮಗಾರಿ ಕೇಂದ್ರದಿಂದ ನೀತಿ ಪರಿಷ್ಕರಣೆ

ಕಾಯ್ದೆ ತಿದ್ದುಪಡಿಗೆ ಮುಂದಾದ ಕೇಂದ್ರ ಸರ್ಕಾರ; ಸ್ಮಾರಕಗಳ ಪುನರ್‌ ವರ್ಗೀಕರಣ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2020, 19:45 IST
Last Updated 15 ಮಾರ್ಚ್ 2020, 19:45 IST
ತಾಜ್‌ಮಹಲ್
ತಾಜ್‌ಮಹಲ್   

ನವದೆಹಲಿ : ದೇಶದ ಸಂರಕ್ಷಿತ ಸ್ಮಾರಕಗಳ ಸುತ್ತಲಿನ ಜಾಗದಲ್ಲಿ ನಿರ್ಮಾಣ ಚಟುವಟಿಕೆಗಳನ್ನು ನಿರ್ವಹಿಸುವ ನೀತಿಯನ್ನು ಪರಾಮರ್ಶಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಸ್ಮಾರಗಳನ್ನು ಅವುಗಳ ಐತಿಹಾಸಿಕ ಮಹತ್ವದ ಆಧಾರದ ಮೇಲೆ ಮರು ವರ್ಗೀಕರಣ ಮಾಡಲಾಗುತ್ತದೆ ಎಂದು ಸಂಸ್ಕೃತಿ ಸಚಿವ ಪ್ರಹ್ಲಾದ್ ಪಟೇಲ್ ಹೇಳಿದ್ದಾರೆ.

ಪುರಾತನ ಸ್ಮಾರಕಗಳು ಹಾಗೂ ಪುರಾತತ್ವ ಸ್ಥಳಗಳ ಕಾಯ್ದೆ 1958ರ ಪ್ರಕಾರ, ಕೇಂದ್ರ ಸರ್ಕಾರದ ಸಂರಕ್ಷಣೆ
ಯಲ್ಲಿರುವ ಸ್ಮಾರಕಗಳ 100 ಮೀಟರ್ ಸುತ್ತಳತೆಯಲ್ಲಿ ನಿರ್ಮಾಣ ಕಾಮಗಾರಿಯನ್ನು ನಿರ್ಬಂಧಿಸಲಾಗಿದೆ. 100ರಿಂದ 200 ಮೀಟರ್ ಒಳಗಿನ ಜಾಗದಲ್ಲಿ ಅನುಮತಿ ಪಡೆಯಬೇಕು ಎಂಬ ನಿಯಮ ಇದೆ. ಇಂತಹ ವಿವಿಧ ನಿಬಂಧ
ನೆಗಳಿಂದಾಗಿ ಸ್ಮಾರಕಗಳ ಸುತ್ತಲಿನ ಸ್ಥಗಳಲ್ಲಿ ನಡೆಯಬೇಕಿದ್ದ ಕಾಮಗಾರಿ
ಗಳು ವರ್ಷಗಳಿಂದ ಬಾಕಿ ಉಳಿದಿವೆ.

ಈಗಿರುವ ನಿರ್ಬಂಧವನ್ನು ತೆಗೆದು ಹಾಕುವ ಸಂಬಂಧ ಕೇಂದ್ರ ಸರ್ಕಾರವು ಕಳೆದ ಸಂಸತ್ ಅಧಿವೇಶನದಲ್ಲಿ ತಿದ್ದುಪಡಿ ಕಾಯ್ದೆಯನ್ನು ಮಂಡಿಸಿತ್ತು. ಲೋಕಸಭೆಯಲ್ಲಿ ಅನುಮೋದನೆ ಸಿಕ್ಕಿದ್ದು, ರಾಜ್ಯಸಭೆಯ ಸಮಿತಿಗೆ ಅದನ್ನು ಪರಿಶೀಲನೆಗೆ ಕಳುಹಿಸಲಾಗಿದೆ.

ADVERTISEMENT

‘ಸಮಾಧಿ ಜಾಗವಾಗಿದ್ದರೆ 300 ಮೀಟರ್ ಸುತ್ತಳತೆಯಲ್ಲಿ ಕಾಮಗಾರಿ ನಡೆಸುವಂತಿಲ್ಲ. ತಾಜ್‌ಮಹಲ್‌ ರೀತಿಯ ಸ್ಮಾರಕಗಳ 500 ಮೀಟರ್ ಸುತ್ತಳತೆಯಲ್ಲಿ ನಿರ್ಬಂಧವಿದೆ. ಸೂರತ್‌ನಲ್ಲಿ ಸ್ಮಾರ್ಟ್ ಸಿಟಿ ನಿರ್ಮಾಣ ಕಾಮಗಾರಿಗೆ ಬ್ರಿಟಿಷರ ಕಾಲದ ಸ್ಮಶಾನ ಅಡ್ಡಿಯಾಗಿದೆ’ ಎಂದು ಸಚಿವರು ಹೇಳಿದ್ದಾರೆ.

ಕೇಂದ್ರದ ಸಂರಕ್ಷಣೆಯಲ್ಲಿರುವದೇಶದ ಒಟ್ಟು ಸ್ಮಾರಕ ಹಾಗೂ ಪುರಾತತ್ವ ಸ್ಥಳಗಳು–3,691

ಕರ್ನಾಟಕದಲ್ಲಿರುವ ಐತಿಹಾಸಿಕ ಸ್ಮಾರಕ ಹಾಗೂ ಪುರಾತತ್ವ ಸ್ಥಳಗಳು–506

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.